ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರ ವಾರ್ಷಿಕ ಮಂಗಲೋತ್ಸವ

Photo by Bhagyavan Sanil

ಮುಲ್ಕಿ ಮೇ 07:  ಗ್ರಾಮೀಣ ಪ್ರದೇಶದಲ್ಲಿ ಭಜನಾ ಸಂಸ್ಕೃತಿಯ ಮೂಲಕ ಸಂಘಟನೆ ನಡೆಯುತ್ತಿರುವುದು ದೇಶದ ಉನ್ನತಿಗೆ ಸಾಕಾರವಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಟಪಾಡಿ ಶಂಕರ ಪೂಜಾರಿ ಹೇಳಿದರು.
ಮುಲ್ಕಿ ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರದ ವಾರ್ಷಿಕ ಮಂಗಲೋತ್ಸವ ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಸಂಘಟನೆಯಿಂದ ಬಲಯುತರಾಗಲು ಭಜನೆಯಿಂದ ಸಾಧ್ಯವಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮಂದಿರದ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ವಹಿಸಿದ್ದರು.
ಅತಿಥಿಗಳಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಉಪಾಧ್ಯಕ್ಷರಾದ ಕೆ. ಲೋಕೇಶ್, ಗೌರವ ಕಾರ್ಯದರ್ಶಿ ನ್ಯಾಯವಾದಿ ಮೋಹನ್ ದಾಸ್, ಮುಂಬೈ ಉದ್ಯಮಿ ಆನಂದ ಕೋಟ್ಯಾನ್ ಉಳ್ಳಾಯ ಸಾನ, ಮುಂಬೈ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಕೆ.ಎಂ.ಕೋಟ್ಯಾನ್ ಚಿತ್ರಾಪು, ಎಂ.ಬಿ.ಸನಿಲ್ ಮುಂಬೈ, ನಿತೇಶ್ ಶೆಟ್ಟಿ ಪಡುಬಿದ್ರಿ ಮುಂಬೈ ಸಮಿತಿ ಅಧ್ಯಕ್ಷ ಟಿ.ಟಿ.ಪೂಜಾರಿ ಉಪಸ್ಥಿತರಿದ್ದರು.ಮಂದಿರದ ಗೌರವಾಧ್ಯಕ್ಷ ಬಾಲಚಂದ್ರ ಸನಿಲ್  ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ದೈವ ನರ್ತಕ ಚಂದಯ್ಯ ಬಂಗೇರರವರಿಗೆ ಸನ್ಮಾನ

ಕಿನ್ನಿಗೋಳಿ ಮೇ 05 : ಮೂರುಕಾವೇರಿ ಶ್ರೀ ಮಾಹಮ್ಮಾಯೀ ದೇವಳದ ವರ್ಷಾವಧಿ ಮಾರಿಪೂಜೆಯ ಸಂದರ್ಭ ಕಳೆದ 20ವರ್ಷಗಳಿಂದ ಶ್ರೀ ಮಾಹಮ್ಮಾಯೀ ದೇವಳದಲ್ಲಿ ಸೇವೆ ಸಲ್ಲಿಸಿದ ದೈವ ನರ್ತಕ ಚಂದಯ್ಯ...

Close