ಮುಲ್ಕಿ ಪ್ರತಿಭಾ ವೈಭವ

Photo by Bhagyavan Sanil

ಮುಲ್ಕಿ ಮೇ 07:  ಮುಲ್ಕಿ ಪ್ರತಿಭಾ ವೈಭವ ಪ್ರಥಮ ಪ್ರಶಸ್ತಿಯನ್ನು ಕಾರ್ನಾಡು ಧರ್ಮಸಾನ ಕ್ರಿಯಾ ಸಮಿತಿ ಪಡೆದುಕೊಂಡಿತು. ದ್ವಿತೀಯ ಪ್ರಶಸ್ತಿಯನ್ನು ಮಟ್ಟು ಕ್ರಿಯಾ ಸಮಿತಿ ಮತ್ತು ತೃತೀಯ ಪ್ರಶಸ್ತಿಯನ್ನು ಕೊಕ್ಕರಕಲ್ ಕ್ರಿಯಾ ಸಮಿತಿ ಗಳಿಸಿದೆ
ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳ ಸಂಘಟನೆ ಶ್ರೀ ನಾರಾಯಣ ಗುರು ಕ್ರಿಯಾ ಸಮಿತಿ ಸದಸ್ಯರಿಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ರಾಘು ಸುವರ್ಣ ಉದ್ಘಾಟಿಸಿದರು. ಅತಿಥಿಗಳಾಗಿ ಮುಂಬೈ ಉದ್ಯಮಿ ಜಗನ್ನಾಥ ಕೋಟ್ಯಾನ್, ಅನಿವಾಸಿ ಉದ್ಯಮಿ ಪುರಂದರ ಚಿತ್ರಾಪು, ಉದ್ಯಮಿ ವಿಜಯ ಕುಬೆವೂರು ಪ್ರಶಸ್ತಿ ವಿತರಿಸಿದರು.
ನೃತ್ಯ ಪ್ರತಿಭೆ ಹರ್ಷಿತಾ ಸುರತ್ಕಲ್, ಪತ್ರಕರ್ತ ನರೇಶ್ ಸಸಿಹಿತ್ಲು, ಜಾನಪದ ಸಂಶೋಧಕ ಪ್ರದೀಪ್ ಸಸಿಹಿತ್ಲು ತೀರ್ಪುಗಾರರಾಗಿದ್ದರು. ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಚಾಲಕ ಎಚ್.ವಿ.ಕೋಟ್ಯಾನ್, ಮುಲ್ಕಿ ಸಂಘದ ಕಾರ್ಯದರ್ಶಿ ಗೋಪೀನಾಥ ಪಡಂಗ, ಕೋಶಾಧಿಕಾರಿ ರಮೇಶ್ ಕೊಕ್ಕರಕಲ್, ಮಹಿಳಾ ಮಂಡಳಿ ಅಧ್ಯಕ್ಷೆ ಸೀತಾ ಗೋಪಾಲ, ಸೇವಾದಳದ ಅಧ್ಯಕ್ಷ ಮೋಹನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಗೋಪೀನಾಥ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ

Photo by Bhagyavan Sanil ಮುಲ್ಕಿ ಮೇ 07 : ಜೀವನದಲ್ಲ್ಲಿ ಅತೀ ಮುಖ್ಯವಾದ ಗ್ರಹಸ್ಥಾಶ್ರಮವು ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ನಡೆದರೆ ಉತ್ತಮ ಸಂತಾನ ಪ್ರಾಪ್ತಿಯಾಗುವ ನಿಟ್ಟಿನಲ್ಲಿ...

Close