ಮುಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ

Photo by Bhagyavan Sanil

ಮುಲ್ಕಿ ಮೇ 07 : ಜೀವನದಲ್ಲ್ಲಿ ಅತೀ ಮುಖ್ಯವಾದ ಗ್ರಹಸ್ಥಾಶ್ರಮವು ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ನಡೆದರೆ ಉತ್ತಮ ಸಂತಾನ ಪ್ರಾಪ್ತಿಯಾಗುವ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಮಾದರಿಯಾಗಿ ಭಗವಂತ ಶ್ರೀನಿವಾಸನಾಗಿ ಪದ್ಮಾವತಿಯನ್ನು ವಿವಾಹವಾಗಿದ್ದಾರೆ ಎಂದು ಸಂಸ್ಕೃತ ಶಿರೋಮಣಿ ಕೋಟ ಚಂಪಿ ಶ್ರೀಕಾಂತ ಭಟ್ ಹೇಳಿದರು.
ಶನಿವಾರ ಮುಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗೋಧೂಳಿ ಸುಮುಹೂರ್ತದಲ್ಲಿ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಜನ ಸಾಮಾನ್ಯರು ವಿವಾಹವಾಗುವ ಮೊದಲು ದೈಹಿಕ ಮತ್ತು ಮಾನಸಿಕ ರೀತಿಯಲ್ಲಿ ಪೂರ್ವ ತಯಾರಿ ಹಾಗೂ ಸರಿಯಾದ ರೀತಿಯಲ್ಲಿ ಮದುವೆಯಾಗಲು ರೀತಿ ಮತ್ತು ನಿಯಮಗಳನ್ನು ಶ್ರೀನಿವಾಸ ಕಲ್ಯಾಣ ತಿಳಿಸುತ್ತದೆ ಎಂದರು.
ದೇವಸ್ಥಾನದ ಅರ್ಚಕ ವರ್ಗದ ನೇತೃತ್ವದಲ್ಲಿ ಬೃಹತ್ ಸಂಖ್ಯೆಯ ಭಜಕ ವೃಂದದ ಕೂಡುವಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

Comments

comments

Leave a Reply

Read previous post:
ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರ ವಾರ್ಷಿಕ ಮಂಗಲೋತ್ಸವ

Photo by Bhagyavan Sanil ಮುಲ್ಕಿ ಮೇ 07:  ಗ್ರಾಮೀಣ ಪ್ರದೇಶದಲ್ಲಿ ಭಜನಾ ಸಂಸ್ಕೃತಿಯ ಮೂಲಕ ಸಂಘಟನೆ ನಡೆಯುತ್ತಿರುವುದು ದೇಶದ ಉನ್ನತಿಗೆ ಸಾಕಾರವಾಗಿದೆ ಎಂದು ಉಡುಪಿ ಜಿಲ್ಲಾ...

Close