ಗ್ಲೋರಿಯಾ ಮಹಿಳಾ ಸಂಘಟನೆ ಕಾರ್ಯಕ್ರಮ

Photo by Bhagyavan Sanil

ಮುಲ್ಕಿ ಮೇ 08 : ಮಹಿಳಾ ಸಂಘಟನೆಗಳು ಪ್ರಭಲವಾಗಿದ್ದರೆ ಪ್ರದೇಶ ಬೆಳಗಲು ಸಾಧ್ಯ ಎಂದು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹೇಳಿದರು. ಮುಲ್ಕಿ ಅಮಲೋದ್ಭವ ಮಾತಾ ಚರ್ಚಿನ ಗ್ಲೋರಿಯಾ ಮಹಿಳಾ ಸಂಘಟನೆಯ ವತಿಯಿಂದ ಮುಲ್ಕಿ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳಾ ಸಂಘಟನೆಗಳು ಗ್ರಾಮೀಣ ಬಡವರ್ಗಗಳಿಗೆ ತಮ್ಮ ಸಹಾಯ ಹಸ್ತ ನೀಡುವುದರ ಜೊತೆಗೆ ವಿದ್ಯೆಗೂ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರುಗಳಾದ ರೆ| ಫಾ| ನೋಬರ್ಟ್ ಲೋಬೊ ವಹಿಸಿದ್ದರು.ಸಂಘಟನೆಯ ಅಧ್ಯಕ್ಷೆ ಪ್ರಮಿಳಾ ಸಲ್ದಾನಾ, ಸಚೇತಕಿ ಸಿ.ಜಯಾ, ಸ್ತ್ರೀ ಸಂಘಟನೆಯ ಕಿನ್ನಿಗೋಳಿ ವಲಯಾಧ್ಯಕ್ಷೆ ಎಡ್ನಾ ಡಿಸೋಜಾ, ಚರ್ಚು ಪಾಲನಾ ಮಂಡಳಿಯ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ ವೇದಿಕೆಯಲ್ಲಿದ್ದರು.

ಈಸಂದರ್ಭ ದೇವದಾಸ್ ಕಾಪಿಕಾಡ್ ದಂಪತಿಗಳು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು. ಸಿ.ಜಯಾ ಸ್ವಾಗತಿಸಿದರು.ಸೆಲಿನ್ ರಾಡ್ರಿಗಸ್ ನಿರೂಪಿಸಿದರು.ಪ್ರಮಿಳಾ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ತುಳು ಸಂಸ್ಕೃತಿ ಉಪನ್ಯಾಸ

Photo by Bhagyavan Sanil ಮುಲ್ಕಿ ಮೇ 08 : ಕರಾವಳಿ ಜಿಲ್ಲೆಯ ಜಾನಪದ ಸಂಸ್ಕೃತಿ ಮುಂಬೈ ಮಹಾನಗರಿಗೆ ಬಂದು ಕುಲಗೆಟ್ಟಿದೆ ಎಂದು ಮುಂಬೈ ಸಾಹಿತಿ ಹಾಗೂ ತುಳು...

Close