ಮುಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ತುಳು ಸಂಸ್ಕೃತಿ ಉಪನ್ಯಾಸ

Photo by Bhagyavan Sanil

ಮುಲ್ಕಿ ಮೇ 08 : ಕರಾವಳಿ ಜಿಲ್ಲೆಯ ಜಾನಪದ ಸಂಸ್ಕೃತಿ ಮುಂಬೈ ಮಹಾನಗರಿಗೆ ಬಂದು ಕುಲಗೆಟ್ಟಿದೆ ಎಂದು ಮುಂಬೈ ಸಾಹಿತಿ ಹಾಗೂ ತುಳು ಅಕಾಡಮಿ ಸದಸ್ಯ ಶಿಮಂತೂರು ಚಂದ್ರಹಾಸ ಸುವರ್ಣ ಅಭಿಪ್ರಾಯಪಟ್ಟರು.
ಮುಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈಯಲ್ಲಿ ತುಳು ಸಂಸ್ಕೃತಿ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು.
ಮುಂಬೈ ತುಳುವರು ಅಪ್ರತಿಮ ಭಾಷಾ ಪ್ರೇಮಿಗಳಾಗಿದ್ದು ತಮ್ಮ ಮಕ್ಕಳಿಗೆ ಭಾಷೆ ಕಲಿಸುವುದರೊಂದಿಗೆ ಇಲ್ಲಿನ ಹಬ್ಬಹರಿದಿನಗಳನ್ನು ಸಂಸ್ಕಾರಕ್ಕೆ ಕಿಂಚಿತ್ತೂ ಧಕ್ಕೆ ಬರದಂತೆ ಪಾಲಿಸುತ್ತಾರೆ ಆದರೆ ಇಲ್ಲಿನ ಭೂತ ಕೋಲ ಮತ್ತು ನಾಗ ದರ್ಶನಗಳು ಮುಂಬೈ ಪ್ರವೇಶಿಸಿ ಮೂಲ ಸಂಸ್ಕೃತಿ ಮತ್ತು ವಿಚಾರಗಳನ್ನು ಮರೆತು ಕೇವಲ ಹಣಗಳಿಸುವ ಮಾದ್ಯಮದ ರೂಪದಲ್ಲಿ ಪ್ರದರ್ಶಿಸಲ್ಪಡುವುದರಿಂದ ಖೇದವಾಗಿದೆ ಎಂದ ಅವರು ನಮ್ಮ ಜಾನಪದ ಸಂಸ್ಕೃತಿ ಮೂಲದಲ್ಲಿರುವಂತೆ ಯಾವೂದೇ ಹಾಸ್ಯಾಸ್ಪದ ಆಧುನಿಕ ಬದಲಾವಣೆಗಳಿಲ್ಲದೆ ರಕ್ಷಿಸಲ್ಪಡಬೇಕು ಮತ್ತು ಯುವ ಪೀಳಿಗೆಗೆ ತಿಳಿಸುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಪ್ರೊ.ಅಂಬ್ರೋಸ್ ಪುರ್ತಾದೊ ವಹಿಸಿದ್ದರು. ನಿಯೋಜಿತ ಅಧ್ಯಕ್ಷ ಜೆ.ಸಿ.ಸಾಲ್ಯಾನ್ ,ಕಾರ್ಯದರ್ಶಿ ರವಿಚಂದ್ರ ವೇದಿಕೆಯಲ್ಲಿದ್ದರು. ಪ್ರೊ.ಅಂಬ್ರೋಸ್ ಪುರ್ತಾದೊ ಸ್ವಾಗತಿಸಿದರು. ರವಿಚಂದ್ರ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ವಿದ್ಯಾ ವಿಹಾರ ಬೇಸಿಗೆ ಶಿಬಿರ ಉದ್ಘಾಟನೆ

Photo by Bhagyavan Sanil ಮುಲ್ಕಿ ಮೇ 08 : ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಶೈಕ್ಷಣಿಕ ಪದ್ಧತಿಯಲ್ಲಿ ಬದಲಾವಣೆ ಅಗತ್ಯವಿದ್ದು ಮಕ್ಕಳ ಭವಿಷ್ಯಕ್ಕಾಗಿ ನೈತಿಕ ಶಿಕ್ಷಣವನ್ನು ನೀಡುವ ಶಿಬಿರಗಳನ್ನು...

Close