ಮುಲ್ಕಿ ವಿದ್ಯಾ ವಿಹಾರ ಬೇಸಿಗೆ ಶಿಬಿರ ಉದ್ಘಾಟನೆ

Photo by Bhagyavan Sanil

ಮುಲ್ಕಿ ಮೇ 08 : ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಶೈಕ್ಷಣಿಕ ಪದ್ಧತಿಯಲ್ಲಿ ಬದಲಾವಣೆ ಅಗತ್ಯವಿದ್ದು ಮಕ್ಕಳ ಭವಿಷ್ಯಕ್ಕಾಗಿ ನೈತಿಕ ಶಿಕ್ಷಣವನ್ನು ನೀಡುವ ಶಿಬಿರಗಳನ್ನು ನಡೆಸುವುದು ಇಂದಿನ ಕಾಲಘಟ್ಟದಲ್ಲಿ ಅತಿ ಅಗತ್ಯ ಎಂದು ಮುಲ್ಕಿ ನಗರ ಪಂಚಾಯಿತಿಯ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ.ಸಾಲಿಯಾನ್ ಹೇಳಿದರು.
ಅವರು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬೆಂಗಳೂರಿನ ಡ್ಯಾಲೆಂಟ್ ಸರ್ಚ್ ಫೌಂಡೇಶನ್, ಧಾರವಾಡದ ಬಾಲ ವಿಕಾಸ ಅಕಾಡೆಮಿ, ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘ, ಮುಲ್ಕಿ ಯುವವಾಹಿನಿ ಘಟಕದ ಜಂಟಿ ಸಂಯೋಜನೆಯಲ್ಲಿ ಸೋಮವಾರ ನಡೆದ ವಿದ್ಯಾ ವಿಹಾರ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಾಘು ಕೆ.ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಬಿರದ ಸಂಯೋಜಕ ನರೇಂದ್ರ ಕುಮಾರ್ ಕೋಟ ಮಾತನಾಡಿ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಶಿಕ್ಷಕ ವರ್ಗಕ್ಕಿದ್ದು ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವ ಬಹುದೊಡ್ಡ ಜವಬ್ದಾರಿಯು ಅವರಿಗಿದೆ ಎಂದರು. ಶ್ರೀ ನಾರಾಯಣಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಚಾಲಕ ಹರಿಶ್ಚಂದ್ರ ಕೋಟ್ಯಾನ್, ಶಿಬಿರದ ನಿರ್ದೇಶಕ ಪ್ರಕಾಶ ಪೂಜಾರಿ, ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷ ರಮೇಶ್ ಬಂಗೇರ ಉಪಸ್ಥಿತರಿದ್ದರು.
ಈ ಶಿಬಿರ ಮೇ 13ರವರೆಗೆ ನಡೆಯಲಿದೆ ಒಟ್ಟು 28 ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ನರೇಂದ್ರ ಕೆರೆಕಾಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಕಾರ್ಯದರ್ಶಿ ಚೇತನ್ ವಂದಿಸಿದರು.

Comments

comments

Leave a Reply

Read previous post:
ಕವತ್ತಾರು ಶ್ರೀ ಅಬ್ಬಗ ದಾರಗ ಮಹಾಲಿಂಗೇಶ್ವರ ದೇವಸ್ಥಾನ ಸಿರಿ ಜಾತ್ರೆ

Photos By Prakash M Suvarna

Close