ಮುಲ್ಕಿ ಬಸ್ಸು ನಿಲ್ದಾಣ – ಕುಡಿಯುವ ನೀರಿನ ವ್ಯವಸ್ಥೆ

Photo by Bhagyavan Sanil

ಮುಲ್ಕಿ ಮೇ 09: ಸಮಾಜ ಸೇವೆಯ ಬದ್ಧತೆಯೊಂದಿಗೆ ಕಂಪೆನಿಯ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಸೇವಾಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಮಂಗಳೂರು ಕೆಐಒಸಿಎಲ್ ಕಂಪೆನಿಯ ಅಧ್ಯಕ್ಷರಾದ ಕೆ.ರಂಗನಾಥ್ ಹೇಳಿದರು.
ಮುಲ್ಕಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಸಂಯೋಜನೆಯಲ್ಲಿ ಮಂಗಳೂರು ಕೆಐಒಸಿಎಲ್ ಕಂಪೆನಿಯ ಪ್ರಾಯೋಜಕತ್ವದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮುಲ್ಕಿ ಬಸ್ಸು ನಿಲ್ದಾಣದಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯಚಂದ್ರ ಜೈನ್‌ರವರು ಮಾತನಾಡಿ, ಸಾರ್ವಜನಿಕ ವಲಯದ ಕಂಪೆನಿಗಳು ವಿದ್ಯೆ ಮತ್ತು ಆರೋಗ್ಯದ ಹಿತರಕ್ಷಣೆಯ ಕಾರ್ಯಗಳನ್ನು ನಡೆಸುವುದರೊಂದಿಗೆ ಸರ್ಕಾರಿ ಶಾಲೆಗಳ ಹಿತಚಿಂತಕರಾಗಬೇಕು ಎಂದರು.
ಈ ಸಂದರ್ಭ ಲಯನ್ಸ್ ಜಿಲ್ಲಾ ಗವರ್ನರ್ ಪಿ.ಕಿಶೋರ್ ರಾವ್, ಮಲ್ಲಿಕಾ ಕೆ.ರಾವ್, ಕೆಐಒಸಿಎಲ್ ಯೋಜನಾ ನಿರ್ದೇಶಕರಾದ ಕೆ.ಸುಬ್ಬಾ ರಾವ್, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಮುಖ್ಯಾಧಿಕಾರಿ ಹರಿಶ್ಚಂದ್ರ.ಪಿ.ಸಾಲ್ಯಾನ್, ಉಪಾಧ್ಯಕ್ಷ ಯೋಗೀಶ್  ಕೋಟ್ಯಾನ್, ಡಾ.ವಿ.ಆರ್.ಶಾಸ್ತ್ರಿ, ಲಯನ್ಸ್ ಅಧ್ಯಕ್ಷ ಹರೀಶ್ ಪುತ್ರನ್, ಲಯನೆಸ್ ಅಧ್ಯಕ್ಷೆ ಶರ್ಮಿಳಾ ಹರೀಶ್, ನಿಕಟಪೂರ್ವ ಅಧ್ಯಕ್ಷ ಕಿಶೋರ್ ಶೆಟ್ಟಿ ಮತ್ತಿತರಿದ್ದರು.
ಹರೀಶ್ ಪುತ್ರನ್ ಸ್ವಾಗತಿಸಿದರು.ವಿಜಯಕುಮಾರ್ ಕುಬೆವೂರು ಕಾರ್ಯಕ್ರಮ ನಿರೂಪಿಸಿದರು. ಮಟ್ಟು ಉದಯ ಅಮೀನ್ ವಂದಿಸಿದರು.

Comments

comments

Leave a Reply

Read previous post:
ನಿಧನ: ಇನ್ನ ಮುದ್ದಾಣು ಶ್ರೀನಿವಾಸ್ ಭಟ್

ಮೇ 08: ಇನ್ನ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕರಾಗಿದ್ದ ಶ್ರೀನಿವಾಸ್ ಭಟ್ (98) ಸೋಮವಾರ ನಿಧನರಾದರು. ದೇವಳದಲ್ಲಿ 8 ದಶಕಗಳಿಂದ ಪ್ರಧಾನ ಅರ್ಚಕರಾಗಿದ್ದ ಅವರಿಗೆ...

Close