ಮುಲ್ಕಿ ಪ್ರೆಸ್ ಕ್ಲಬ್‌ಗೆ ರಾಮಚಂದ್ರ ಆಚಾರ್ಯ ಅಧ್ಯಕ್ಷರಾಗಿ ಆಯ್ಕೆ

ಮುಲ್ಕಿ ಮೇ ೧೦:  ಇಲ್ಲಿನ ಉಚ್ಚಿಲ, ಪಡುಬಿದ್ರಿ, ಮುಲ್ಕಿ, ಸುರತ್ಕಲ್, ಕಿನ್ನಿಗೋಳಿ, ಬಜಪೆ, ವ್ಯಾಪ್ತಿಯ ಪರ್ತಕರ್ತರ ಸಂಘಟನೆಯಾದ ಮುಲ್ಕಿ ಪ್ರೆಸ್ ಕ್ಲಬ್‌ನ ಮುಂದಿನ ಮೂರು ವರ್ಷದ ಅವಧಿಯ ಅಧ್ಯಕ್ಷರಾಗಿ ಪಡುಬಿದ್ರಿಯ (ಉದಯವಾಣಿ) ವರದಿಗಾರರಾದ ರಾಮಚಂದ್ರ ಆಚಾರ್ಯ (ಆರಾಮ) ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮುಲ್ಕಿ ಸ್ವಾಗತ್ ಸಭಾಂಗಣದಲ್ಲಿ ಇತ್ತೀಚೆಗೆ ನಿಕಟ ಪೂರ್ವ ಅಧ್ಯಕ್ಷ ಭಾಗ್ಯವಾನ್ ಸನಿಲ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಸಹಿತ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕ್ಲಬ್‌ನ ಸದಸ್ಯರ ಹಾಗೂ ಸಂಸ್ಥೆಯ ವಿವಿಧ ಕಾರ್ಯ ಯೋಜನೆಗಳನ್ನು ಚರ್ಚಿಸಲಾಯಿತು.
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಮಿಥುನ್ ಕೊಡೆತ್ತೂರು (ಹೊಸದಿಗಂತ), ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಡುಬಿದ್ರಿ (ಪ್ರಜಾವಾಣಿ), ಕಾರ್ಯದರ್ಶಿ ನರೇಂದ್ರ ಕೆರೆಕಾಡು(ಪ್ರಜಾವಾಣಿ), ಕೋಶಾಧಿಕಾರಿ ಹರೀಶ್‌ಕುಮಾರ್ (ಎಚ್ಕೆ) ಹೆಜಮಾಡಿ (ವಿಜಯಕರ್ನಾಟಕ), ಆಂತರಿಕ ಲೆಕ್ಕ ಪರಿಶೋಧಕರಾಗಿ ಭಾಗ್ಯವಾನ್ ಸನಿಲ್ ಮುಲ್ಕ್ಕಿ(ವಿಜಯವಾಣಿ),
ಕಾರ್ಯಕಾರಿ ಸಮಿತಿಯಲ್ಲಿ ಎಂ.ಸರ್ವೋತ್ತಮ ಅಂಚನ್ (ಉದಯವಾಣಿ), ಲೋಕೇಶ್ ಸುರತ್ಕಲ್ (ವಿಜಯ ಕರ್ನಾಟಕ), ರಘುನಾಥ ಕಾಮತ್ ಕೆಂಚನಕೆರೆ (ಉದಯವಾಣಿ), ಬಾಲಕೃಷ್ಣ ಪೂಜಾರಿ ಉಚ್ಚಿಲ (ಜಯಕಿರಣ), ಶರತ್‌ಶೆಟ್ಟಿ ಕಿನ್ನಿಗೋಳಿ (ವಿಜಯ ಕರ್ನಾಟಕ), ಪ್ರಕಾಶ್ ಸುವರ್ಣ(ಕನ್ನಡ ಪ್ರಭ), ವಾಮನ ಕರ್ಕೇರಾ ಕೊಲ್ಲೂರು (ವಿಜಯ ಕರ್ನಾಟಕ) ರವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Leave a Reply

Read previous post:
ಮುಲ್ಕಿ ಬಸ್ಸು ನಿಲ್ದಾಣ – ಕುಡಿಯುವ ನೀರಿನ ವ್ಯವಸ್ಥೆ

Photo by Bhagyavan Sanil ಮುಲ್ಕಿ ಮೇ 09: ಸಮಾಜ ಸೇವೆಯ ಬದ್ಧತೆಯೊಂದಿಗೆ ಕಂಪೆನಿಯ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಸೇವಾಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಮಂಗಳೂರು ಕೆಐಒಸಿಎಲ್...

Close