ಕಿನ್ನಿಗೋಳಿಯಲ್ಲಿ ಮುಗ್ರೋಡಿಸ್ ಎನ್‌ಕ್ಲೇವ್ ಗೆ ಭೂಮಿಪೂಜೆ

Photos by Lionel Pinto

ಕಿನ್ನಿಗೋಳಿ ಮೇ 11: ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಬಳಿ ನಿರ್ಮಿಸಲು ಉದ್ದೇಶಿಸಿರುವ ಮುಗ್ರೋಡಿಸ್ ಕಿನ್ನಿಗೋಳಿ ಎನ್‌ಕ್ಲೇವ್ ವಸತಿ ಮತ್ತು ವಾಣಿಜ್ಯ ಸಮುಚ್ಚಯದ ಭೂಮಿ ಪೂಜೆ ಶುಕ್ರವಾರ ನಡೆಯಿತು. ಆರು ಮಹಡಿಯ ಕಟ್ಟಡ ಹೊಂದಿರುವ 48 ವಸತಿ ಮತ್ತು 33 ವಾಣಿಜ್ಯ ಮಳಿಗೆಗಳ ಸಹಿತ ಸಕಲ ಸೌಕರ್ಯಗಳುಳ್ಳ ಸಮುಚ್ಚಯದ ಭೂಮಿ ಪೂಜೆಯನ್ನು ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಮತ್ತು ಕಿನ್ನಿಗೋಳಿ ಚರ್ಚ್‌ನ ಸಹಾಯಕ ಧರ್ಮ ಗುರು ರೆ|ಫಾ| ಮೈಕಲ್ ಮಸ್ಕರೇನಸ್‌ರ ಆಶೀರ್ವಚನದಲ್ಲಿ ಹಿರಿಯರಾದ ದಾಸು ಶೆಟ್ಟಿ ನೆರವೇರಿಸಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಜಿತ್ಕುಮಾರ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಯುಗಪುರುಷದ ಭುವನಾಭಿರಾಮ ಉಡುಪ, ಸಂಸ್ಥೆಯ ಮಾಲಕ ಡಿ. ಸುಧಾಕರ ಶೆಟ್ಟಿ, ಯೋಜನೆಯ ಸಹಭಾಗಿತ್ವ ಹೊಂದಿರುವ ದೀಪಕ್ ರೊಡ್ರಿಗಸ್ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
Heart of Kinnigoli City

Photo

Close