ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ-ರಕ್ತದಾನ ಶಿಬಿರ

 ಕಿನ್ನಿಗೋಳಿ ಮೇ13: ತಪೋವನ, ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರೋಟರಿ ಕ್ಲಬ್, ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಇ.ಟಿ ರೋವರ್ಸ್, ಆರ್.ಸಿ.ಸಿ, ಕಾರ್ನಾಡು, ತೋಕೂರು, ನಡಿಕುದ್ರು ಮತ್ತು ಕೆರೆಕಾಡು, ರೋಟಾರಾಕ್ಟ್ ಕ್ಲಬ್ ಮುಲ್ಕಿ, , ಕಾರ್ನಾಡ್ ಯಂಗ್ ಸ್ಟಾರ್ ಎಸೋಶಿಯೇಶನ್, ಕಾರ್ನಾಡು, , ಜಿಲ್ಲಾ ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಉಡುಪಿ ಮತ್ತು ನಿಟ್ಟೆ ವಿದ್ಯಾ ಸಂಸ್ಥೆ, ಇವರ ಜಂಟಿ ಆಶ್ರಯದಲ್ಲಿ ನಡೆದ 14ನೇ ವರ್ಷದ ರಕ್ತ ವರ್ಗೀಕರಣ ಮತ್ತು ರಕ್ತದಾನ ಶಿಬಿರ ವು ದಿನಾಂಕ 11 ಶುಕ್ರವಾರ ರೋ| ಯೋಗೀಶ್ ಕೋಟ್ಯಾನ್ , ಉಪಾಧ್ಯಕ್ಷರು, ನಗರ ಪಂಚಾಯಿತಿ, ಮುಲ್ಕಿ ಇವರು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ನಡೆದ ಸಭಾಕಾರ್ಯಾಕ್ರಮದಲ್ಲಿ ಡಾ| ಶರತ್ ಕುಮಾರ್ , ವೈದ್ಯಾಧಿಕಾರಿಗಳು, ಜಿಲ್ಲಾ ಆಸ್ಪತ್ರೆ, ಉಡುಪಿ ಇವರು ರಕ್ತದಾನದಿಂದ ಆಗುವ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಸುತ್ತಾ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಜೀವಮಾನದಲ್ಲಿ ಸುಮಾರು 176 ಬಾರಿ ರಕ್ತದಾನವನ್ನು ಮಾಡಬಹುದೆಂದು ಮಾಹಿತಿ ನಿಡಿದರು.

ಇನ್ನೊರ್ವ ಅತಿಥಿ ಶ್ರಿ ಪಿ. ಸಿ. ಸಾಲಿಯಾನ್, ಅಧ್ಯಕ್ಷರು, ಆರ್.ಸಿ.ಸಿ. ತೋಕೂರು ರಕ್ತದಾನದಿಂದ ಹಲಾವರು ಜೀವವನ್ನು ಉಳಿಸಬಹುದೆಂದು ಯುವಕರನ್ನು ಹುರಿದುಂಬಿಸಿದರು.

ಸಮಾರಂಭದ ಅಧ್ಯಕ್ಷರಾದ ರೋ ಫ್ರೋ ಅಂಬ್ರೋಸ್ ಪುಟ್ರಾಡೋ ,ಅಧ್ಯಕ್ಶರು ರೋಟರಿ ಕ್ಲಬ್ ರಕ್ತದಾನದ ಮಹತ್ವವ್ವನ್ನು ತಿಳಿಸುತ್ತಾ, ಇಂತಹ ಸಮಾಜ ಮುಖಿಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಯಾವಾಗಲೂ ಸಿದ್ಧ ಎಂದು ಕರೆಯಿತ್ತರು. ಮುಖ್ಯ ಅತಿಥಿಯಾದ ರೋಟರೀ ಕ್ಲಬ್, ಮುಲ್ಕಿ ಇದರ ನಿಯೋಜಿತ ಅಧ್ಯಕ್ಷರಾದ ಜೆ.ಸಿ ಸಾಲಿಯಾನ್ ಇವರು ತನ್ನ ಜೀವನದ ರಕ್ತದಾನದ ಘಟನೆಯನ್ನು ನೆನಪಿಸಿಕೊಳ್ಳುತ್ತಾ ರಕ್ತದಾನದ ಮಹತ್ವನ್ನು ತಿಳಿಸಿದರು.

ಸಮಾರಂಭದಲ್ಲಿ ಶ್ರೀ ಸುರೇಶ್ ಕುಮಾರ್, ಶ್ರೀ ಚೇತನ್, ಶ್ರೀ ಚಂದ್ರಹಾಸ್, ಶ್ರೀ ದೀಪಕ್ ಶೆಟ್ಟಿ , ಎನ್.ಎಸ್,ಎಸ್. ಅಧಿಕಾರಿ ಶ್ರೀ ರಘುರಾಮ್ ರಾವ್ ಉಪಸ್ಥಿತರಿದ್ದರು.

ಸಂಸ್ಥೆಯ ವಿದ್ಯಾರ್ಥಿಯಾದ ರಜತ್ ಕುಮಾರ್ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ವೈ.ಎನ್. ಸಾಲಿಯಾನ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿಯಾಗಿರುವ ಶ್ರೀ ಹರಿ ಎಚ್. ಇವರು ಧನ್ಯವಾದವಿತ್ತರು. ಶ್ರೀ ವಿಶ್ವನಾಥ್ ರಾವ್ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಮತ್ತು ವಿವಿಧ ಸಂಸ್ಥೆಗಳ ಪದಾಧಿಕಾರಿಗಳಿಂದ ಸುಮಾರು 75 ಯುನಿಟ್ ಗಿಂತಲೂ ಹೆಚ್ಚು ರಕ್ತ ಸಂಗ್ರಹ ಮಾಡಲಾಯಿತು.

Comments

comments

Leave a Reply

Read previous post:
ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ್ ಟೆಂಗಿನಕಾಯಿ ಮುಲ್ಕಿಗೆ ಭೇಟಿ

Photo by Narendra Kerekadu ಮುಲ್ಕಿ ಮೇ 13 : ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗಿ ವಿವಿಧ ಶೈಕ್ಷಣಿಕ ಪದ್ಧತಿಯಲ್ಲಿ ನಾಯಕತ್ವ ಶಿಬಿರವನ್ನು ನಡೆಸಲಾಗುತ್ತಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ...

Close