ದಿ.ಕೆ.ಸೋಮಪ್ಪ ಸುವರ್ಣ ಸ್ಮಾರಕ ಕ್ರಿಕೆಟ್ ಕಕ್ವ ತಂಡಕ್ಕೆಪ್ರಶಸ್ತಿ

Photo by Bhagyavan Sanil

ಮುಲ್ಕಿ ಮೇ 15 : ಬಿಲ್ಲವ ಸಮಾಜ ಸೇವಾ ಸಂಘದ ಸೇವಾದಳದ ಆಶ್ರಯದಲ್ಲಿ ನಡೆಸಲಾದ ದಿ.ಕೆ.ಸೋಮಪ್ಪ ಸುವರ್ಣ ಸ್ಮಾರಕ ಕ್ರಿಕೆಟ್ ಪಂದ್ಯಾಟದ ಪ್ರಶಸ್ತಿಯನ್ನು ಕಕ್ವ ಗ್ರಾಮದ ತಂಡ ಗಳಿಸಿದೆ. ದ್ವಿತೀಯ ಪ್ರಶಸ್ತಿಯನ್ನು ಬಡಗುಹಿತ್ಲು ಗ್ರಾಮ ತಂಡವು ಗಳಿಸಿದೆ
ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸ್ವಜಾತಿ ಯುವಕರಿಗಾಗಿ ನಡೆದ ಪಂದ್ಯಾಟದಲ್ಲಿ 16ಗ್ರಾಮಗಳ ತಂಡಗಳು ಭಾಗವಹಿಸಿವೆ.ಪ್ರಥಮ ಪ್ರಶಸ್ತಿ ರೂ3,001 ನಗದು ಮತ್ತು ಫಲಕ,ದ್ವಿತೀಯ ರೂ2,001 ನಗದು ಮತ್ತು ಫಲಕ ನೀಡಲಾಯಿತು.
ಉತ್ತಮ ಎಸೆತಗಾರ (ಬೌಲರ್) ಕಕ್ವ ತಂಡದ ಸಂದೀಪ್, ಉತ್ತಮ ದಾಂಡಿಗನಾಗಿ ಬಡಗುಹಿತ್ಲುವಿನ ಲತೇಶ್, ಸವ್ಯಸಾಚಿಯಾಗಿ ಕಕ್ವ ತಂಡದ ಜಗದೀಶ್ ಪ್ರಶಸ್ತಿ ಪಡೆದರು.
ಈ ಸಂದರ್ಭ ದಿ.ಸೋಮಪ್ಪ ಸುವರ್ಣರ ಪುತ್ರ ಉದ್ಯಮಿ ಹರೀಂದ್ರ ಸುವರ್ಣ ಮಾತನಾಡಿ ಯುವಕರು ಕ್ರೀಡೆಯೊಂದಿಗೆ ಸಂಘ ನಿರ್ವಹಿಸುವ ಇತರ ಸೇವಾ ಕಾರ್ಯಗಳಲ್ಲಿ ಉತ್ತಮ ಸಹಭಾಗಿತ್ವವನ್ನು ನೀಡಬೇಕು. ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸೋಮಪ್ಪ ಸುವರ್ಣರು ನಮಗೆಲ್ಲಾ ಆದರ್ಶಪ್ರಾಯರಾಗಿದ್ದಾರೆ ಎಂದ ಅವರು ಪ್ರಶಸ್ತಿಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ,ರಾಘು ಸುವರ್ಣ ವಹಿಸಿದ್ದರು. ಸೇವಾದಳದ ಅಧ್ಯಕ್ಷ ಮೋಹನ್ ಕೋಟ್ಯಾನ್, ಚಂದ್ರಶೇಖರ, ಯದೀಶ್ ಅಮೀನ್, ವಾಮನ ನಡಿಕುದ್ರು ಉದಯ ಅಮೀನ್ ಮಟ್ಟು, ಗೋಪೀನಾಥ ಪಡಂಗ, ನವೀನ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ಕುಡಿಯುವ ನೀರಿನ ತೀವ್ರ ಸಮಸ್ಯೆ

 Photo by Bhagyavan Sanil & Prakash M Suvarna ಮುಲ್ಕಿ ಮೇ 15 : ಕುಡಿಯುವ ನೀರಿನ ತೀವ್ರ ಸಮಸ್ಯೆಯಿಂದ ಬಳಲಿ ನಗರ ಪಂಚಾಯತ್ ಸಿಬ್ಬಂದಿಗೆ ಮೂಲ್ಕಿ ಅಮೃತಾನಂದಮಯಿ...

Close