ಪಕ್ಷಿಕೆರೆ ಪಂಜದ ತಂದೆ ಮನೆಯಲ್ಲಿ ವೀರಪ್ಪ ಮೊಯಿಲಿ

Photos by Mithuna Kodethoor

ಕಿನ್ನಿಗೋಳಿ: ಕೇಂದ್ರ ಸಚಿವ ವೀರಪ್ಪ ಮೊಯಿಲಿ ಶನಿವಾರ ತನ್ನ ತಂದೆಯ ಕುಟುಂಬದ ಮೂಲ ಮನೆ ಪಕ್ಷಿಕೆರೆ ಪಂಜ ಗೋಳಿದಡಿ ಮನೆಗೆ ಬೇಟಿ ನೀಡಿ ದೈವಗಳ ವಾರ್ಷಿಕ ತಂಬಿಲದಲ್ಲಿ ಪಾಲ್ಗೊಂಡರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಈ ಮನೆಯ ಪರಿಸರದ ಗೋಳಿದ ಮರ, ಕಲ್ಲುಗಳು, ನದಿ,ಗದ್ದೆಗಳು ನನ್ನ ಕಾವ್ಯಾತ್ಮಕ ಬದುಕಿಗೆ ಪ್ರೇರಣೆ ನೀಡಿದ್ದು ನನ್ನ ಬಾಲ್ಯದ ನೆನಪುಗಳು ಮತ್ತೆ ಮರುಕಳಿಸುತ್ತಿವೆಯೆಂದರು. ಮಾಜಿ ಮೇಯರ್ ಶಶಿದರ ಹೆಗ್ಡೆ, ತೇಜೋಮಯಿ, ಪಂಚಾಯತ್ ಸದಸ್ಯರಾದ ಸುರೇಶ್ ದೇವಾಡಿಗ, ಮಯ್ಯದಿ, ಗೋಳಿದಡಿ ಕುಟುಂಬದ ಸುಂದರ ದೇವಾಡಿಗ, ಉಮೇಶ್ ಪಂಜ, ಲೀಲಾ ದೇವಾಡಿಗ, ಶಾಮ್ ದೇವಾಡಿಗ, ಮತ್ತಿತರರಿದ್ದರು.

 

Comments

comments

Leave a Reply

Read previous post:
ದಿ.ಕೆ.ಸೋಮಪ್ಪ ಸುವರ್ಣ ಸ್ಮಾರಕ ಕ್ರಿಕೆಟ್ ಕಕ್ವ ತಂಡಕ್ಕೆಪ್ರಶಸ್ತಿ

Photo by Bhagyavan Sanil ಮುಲ್ಕಿ ಮೇ 15 : ಬಿಲ್ಲವ ಸಮಾಜ ಸೇವಾ ಸಂಘದ ಸೇವಾದಳದ ಆಶ್ರಯದಲ್ಲಿ ನಡೆಸಲಾದ ದಿ.ಕೆ.ಸೋಮಪ್ಪ ಸುವರ್ಣ ಸ್ಮಾರಕ ಕ್ರಿಕೆಟ್ ಪಂದ್ಯಾಟದ ಪ್ರಶಸ್ತಿಯನ್ನು...

Close