ಪಡುಬಿದ್ರಿ: ತಾತ್ಕಾಲಿಕ ದ್ರವ ತ್ಯಾಜ್ಯ ಸಂಗ್ರಹಣಾಗಾರ ನಿರ್ಮಿಸಿ

Photo by Bhagyavan Sanil

ಪಡುಬಿದ್ರಿ: ಒಳಚರಂಡಿ ವ್ಯವಸ್ಥೆ ರಹಿತ ಪಡುಬಿದ್ರಿಯ ಎಲ್ಲಾ ಹೋಟೆಲ್ ಮಾಲೀಕರು ಮತ್ತು ಸಂಕೀರ್ಣಗಳು ಗ್ರಾಮದಲ್ಲಿ ಶಾಶ್ವತ ಒಳಚರಂಡಿ ವ್ಯವಸ್ಥೆ ಜಾರಿಗೊಳ್ಳುವ ತನಕ ತಾತ್ಕಾಲಿಕ ದ್ರವ ತ್ಯಾಜ್ಯ ಸಂಗ್ರಹಣಾಗಾರ ನಿರ್ಮಿಸಿ ನಿರ್ವಹಣೆ ಮಾಡಬೇಕೆಂದು ಸೂಚಿಸಲಾಗಿದೆ.
ಸೋಮವಾರ ಪಡುಬಿದ್ರಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಗ್ರಾಮದ ಎಲ್ಲಾ ಹೋಟೆಲ್ ಮಾಲೀಕರ ಸಭೆ ಕರೆದು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಆಚಾರ್ಯ, ಅಬಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಮೇಲಿನಂತೆ ಸೂಚನೆ ನೀಡಿದ್ದಾರೆ.
ಮಂಗಳೂರು-ಉಡುಪಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅತೀ ಹೆಚ್ಚು ಹೋಟೆಲ್ ಮತ್ತು ವಸತಿ ಸಮುಚ್ಛಯಗಳನ್ನು ಹೊಂದಿರುವ ಪಡುಬಿದ್ರಿಯಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಅಥವಾ ದ್ರವ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಾಗಿಲ್ಲ. ಕಳೆದ ಹಲವಾರು ವರ್ಷಗಳಿಂದ ಸ್ಥಳೀಯಾಡಳಿತವು ಈ ಬಗ್ಗೆ ಹಲವು ಪ್ರಯತ್ನ ನಡೆಸಿದ್ದರೂ, ಸೂಕ್ತ ಸ್ಥಳಾವಕಾಶ ಕೊರತೆ ಹಾಗೂ ಸಾರ್ವಜನಿಕ ವಿರೋಧದಿಂದ ದ್ರವತ್ಯಾಜ್ಯ ನಿರ್ವಹಣೆ ರಸ್ತೆಯಲ್ಲಿ ನಡೆದಾಡುವ ಮಂದಿಗೆ ಅಸಹನೀಯವೆನಿಸಿತ್ತು. ಸಾರ್ವಜನಿಕ ನೇಕರು ಈ ಬಗ್ಗೆ ಪದೇ ಪದೇ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಪೂರಕವಾಗಿ ಸುಪ್ರೀಂ ಕೋರ್ಟು ಸ್ಪಷ್ಟ ನಿರ್ದೇಶನ ನೀಡಿ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಸೂಚನೆ ನೀಡಿತ್ತು.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಪಡುಬಿದ್ರಿಗೆ ಆಗಮಿಸಿ ಸಮಗ್ರ ಪರಿಶೀಲನೆ ನಡೆಸಿದ್ದು, ಶಾಶ್ವತ ತ್ಯಾಜ್ಯ ನಿರ್ವಹಣೆ ಇನ್ನೂ ೨ ವರ್ಷ ಆಗುವುದು ಅಸಾಧ್ಯವಾದ ಹಿನ್ನಲೆಯಲ್ಲಿ ಹೋಟೆಲ್ ಮಾಲೀಕರು ಮತ್ತು ವಸತಿ ಸಮುಚ್ಛಯಗಳು ಸ್ವಯಂ ನಿರ್ವಹಣೆ ನಡೆಸುವಂತೆ ಆದೇಶ ನೀಡಿದ್ದರು.
ಈ ಹಿನ್ನಲೆಯಲ್ಲಿ ಸೋಮವಾರ ಎಲ್ಲಾ ಹೋಟೆಲ್ ಮಾಲೀಕರು ಸಭೆಯಲ್ಲಿ ಉಪಸ್ಥಿತರಿದ್ದು, ಪಂಚಾಯತ್ ನಿರ್ಣಯಕ್ಕೆ ಸಹಮತ ಸೂಚಿಸಿದ್ದಾರೆ. ಸ್ವಯಂ ನಿರ್ವಹಣೆ ವೇಳೆ ತ್ಯಾಜ್ಯ ಗುಂಡಿ ತುಂಬಿದಲ್ಲಿ ಯಂತ್ರಬಳಸಿ ಸ್ವಚ್ಚಗೊಳಿಸುವಂತೆಯೂ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಪಂಚಾಯತ್ ನಿಯಮದಂತೆ ಕಠಿಣ ಕ್ರಮಕೈಗೊಳ್ಳುವುದಾಗಿಯೂ ತಿಳಿಸಲಾಗಿದೆ.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೇವಂತಿ ಸದಾಶಿವ ಹೋಟೆಲ್ ಮಾಲೀಕರುಗಳಾಧ ರಿಬಿತಾ ವಿಜಯ ಶೆಟ್ಟಿ, ಮಿಥುನ್ ಆರ್.ಹೆಗ್ಡೆ, ವೈ. ಸುಧೀರ್ ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ, ವೈ. ಸುಕುಮಾರ್, ನವೀನ್ ಎನ್. ಶೆಟ್ಟಿ ರಾಜಾರಾಂ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಪಕ್ಷಿಕೆರೆ ಪಂಜದ ತಂದೆ ಮನೆಯಲ್ಲಿ ವೀರಪ್ಪ ಮೊಯಿಲಿ

Photos by Mithuna Kodethoor ಕಿನ್ನಿಗೋಳಿ: ಕೇಂದ್ರ ಸಚಿವ ವೀರಪ್ಪ ಮೊಯಿಲಿ ಶನಿವಾರ ತನ್ನ ತಂದೆಯ ಕುಟುಂಬದ ಮೂಲ ಮನೆ ಪಕ್ಷಿಕೆರೆ ಪಂಜ ಗೋಳಿದಡಿ ಮನೆಗೆ ಬೇಟಿ ನೀಡಿ ದೈವಗಳ...

Close