ಮುಲ್ಕಿ ಕುಡಿಯುವ ನೀರಿನ ತೀವ್ರ ಸಮಸ್ಯೆ

 Photo by Bhagyavan Sanil & Prakash M Suvarna

ಮುಲ್ಕಿ ಮೇ 15 : ಕುಡಿಯುವ ನೀರಿನ ತೀವ್ರ ಸಮಸ್ಯೆಯಿಂದ ಬಳಲಿ ನಗರ ಪಂಚಾಯತ್ ಸಿಬ್ಬಂದಿಗೆ ಮೂಲ್ಕಿ ಅಮೃತಾನಂದಮಯಿ ನಗರದ ಪರಿಶಿಷ್ಟ ಕಾಲನಿ ಜನರು ದಿಗ್ಭಂಧನ ವಿಧಿಸಿದ ಘಟನೆ ಭಾನುವಾರ ಸಂಜೆ ಘಟಿಸಿದೆ.
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಅಮೃತಾನಂದಮಯಿ ನಗರದ ಪರಿಶಿಷ್ಟ ಕಾಲನಿಯಲ್ಲಿ 76 ಮನೆಗಳಿದ್ದು ಕುಡಿಯುವ ನೀರಿಗೆ ಪಂಚಾಯತ್ ನಳ್ಳಿನೀರನ್ನು ಸಂಪೂರ್ಣವಾಗಿ ಆಶ್ರಯಿಸಲಾಗಿದೆ. ಕಳೆದ ಹಲವು ದಿನಗಳಿಂದ ತುಂಬೆಯ ನೀರು ಬರದ ಕಾರಣ ಟ್ಯಾಂಕರ್ ನೀರನ್ನು ಬಳಸಲಾಗಿತ್ತು ಆದರೆ ಟ್ಯಾಂಕರ್ ಸಿಬ್ಬಂದಿ ಎದುರಿನ 4 ಮನೆಗೆ ನೀರು ನೀಡಿ ವಾಪಾಸಾಗುತ್ತಾರೆ ಎಂದು ಅಲ್ಲಿನ ನಾಗರೀಕರು ಹೇಳಿದ್ದಾರೆ.
ಇದೀಗ ಕಳೆದ ಕೆಲವು ದಿನಗಳಿಂದ ಪಂಚಾಯತ್ ನಳ್ಳಿ ನೀರು ಬಾರದೆ ತೀವ್ರ ಸಮಸ್ಯೆಯಲ್ಲಿ ಪಂಚಾಯತ್‌ಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನಕ್ಕೆ ಬಾರದಿರುವುದರಿಂದ ಪಂಚಾಯತ್ ಸಿಬ್ಬಂದಿಗೆ ದಿಗ್ಭಂದನ ವಿಧಿಸಿದ್ದೇವೆ ಈ ನಿಟ್ಟಿನಲ್ಲಾದರೂ ನಗರ ಪಂಚಾಯತ್ ಅಧ್ಯಕ್ಷರು ಅಥವಾ ಮುಖ್ಯಾಧಿಕಾರಿಗಳು ಸ್ಪಂದಿಸುತ್ತಾರೊ ನೋಡುತ್ತಿದ್ದೇವೆ ಎಂದರು. ನಗರ ಪಂಚಾಯತ್ ನಮ್ಮ ಮೇಲೆ ಮಲತಾಯಿ ಧೋರಣೆ ಮಾಡುತ್ತಿದೆ. ಕುಡಿಯುವ ನೀರಿಗೆ ಬಾವಿ ತೋಡುತ್ತೇವೆ ಅಂಬೆಡ್ಕರ್ ಭವನ ನಿರ್ಮಾಣ ಮುಂತಾದ ಯೋಜನೆಗಳನ್ನು ಪೂರ್ಣಗೋಳಿಸದೆ ನಮಗೆ ಸಮಸ್ಯೆಯುಂಟುಮಾಡಿದೆ ಎಂದು ಹೇಳಿದರು.
ಈ ಸಂದರ್ಭ ಅಲ್ಲಿದ್ದ ಸಾರ್ವಜನಿಕರನ್ನು ಫೋನ್ ಮೂಲಕ ಸಂಪರ್ಕಿಸಿದ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಅನಿಯಮಿತವಾಗಿ ವಿದ್ಯುತ್ ಕಡಿತದಿಂದ ನೀರು ಪಂಪಿಂಗ್ ಸಮಸ್ಯೆಯಾಗಿದೆ. ಮಾತ್ರವಲ್ಲ ಅಲ್ಲಿನ ಕೊಳವೆ ಬಾವಿಯ ನೀರು ಕಾಲನಿಗೆ ಸಾಕಾಗುವುದಿಲ್ಲ. ತುಂಬೆ ನೀರು ಬಂದರೆ ಸಮಸ್ಯೆ ಇಲ್ಲ. ಕಾಲನಿಯ ಬಾವಿಗಾಗಿ 5ಲಕ್ಷರೂ ಮಂಜೂರಾಗಿದ್ದು ಈ ಮೊತ್ತಕ್ಕೆ ಕಾಮಗಾರಿ ಅಸಾಧ್ಯವೆಂದು ಗುತ್ತಿಗೆದಾರರು ಹೇಳಿದ್ದಾರೆ. ಹೆಚ್ಚುವರಿ ಮೊತ್ತವನ್ನು ಕಾದಿರಿಸಿ ಯೋಜನೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು. ಅಂಬೆಡ್ಕರ್ ಭವನದಲ್ಲೂ ಗುತ್ತಿಗೆದಾರರಿಗೆ ಬಾಕಿ ಇರುವ ಕಾರಣ ಯೋಜನೆ ಅಪೂರ್ಣವಾಗಿದ್ದು ಶೀಘ್ರ ಸಂಪೂರ್ಣ ಗೊಳಿಸಲಾಗುವುದು. ಸಧ್ಯ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

Comments

comments

Leave a Reply

Read previous post:
ವಿದ್ಯಾ ವಿಹಾರ ಬೇಸಿಗೆ ಶಿಬಿರದ ಸಮಾರೋಪ

Photo by Bhagyavan Sanil & Narendra Kerekadu ಮುಲ್ಕಿ ಮೇ 15 : ಸೃಜನಶೀಲವಾಗಿ ಕಾರ್ಯನಿರ್ವಹಿಸಲು ಧನಾತ್ಮಕ ಚಿಂತನೆ ಅಗತ್ಯ ಎಂದು ನರೇಂದ್ರ ಕುಮಾರ್ ಕೋಟ...

Close