ವಿದ್ಯಾ ವಿಹಾರ ಬೇಸಿಗೆ ಶಿಬಿರದ ಸಮಾರೋಪ

Photo by Bhagyavan Sanil & Narendra Kerekadu

ಮುಲ್ಕಿ ಮೇ 15 : ಸೃಜನಶೀಲವಾಗಿ ಕಾರ್ಯನಿರ್ವಹಿಸಲು ಧನಾತ್ಮಕ ಚಿಂತನೆ ಅಗತ್ಯ ಎಂದು ನರೇಂದ್ರ ಕುಮಾರ್ ಕೋಟ ಹೇಳಿದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಮತ್ತು ಟ್ಯಾಲೆಂಟ್ ಸರ್ಚ್ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಯುವವಾಹಿನಿ ಮುಲ್ಕಿ ಘಟಕದ ಸಂಯೋಜನೆಯಲ್ಲಿ ನಡೆದ ವಿದ್ಯಾ ವಿಹಾರ ಬೇಸಿಗೆ ಶಿಬಿರದ ಸಮಾರೋಪ ಭಾಷಣ ಮಾಡಿದರು.

ವಿದ್ಯಾರ್ಥಿಗಳು 7ದಿನಗಳ ಕಾಲ ತಿಳಿದುಕೊಂಡ ವಿಷಯಗಳನ್ನು ತಮ್ಮ ಶೈಕ್ಷಣಿಕ ಜೀವನದಲ್ಲಿ ಉತ್ತಮವಾಗಿ ಅಳವಡಿಸಿಕೊಳ್ಳಿ ಎಂದರು.
ಯುವ ವಾಹಿನಿ ಮುಲ್ಕಿ ಘಟಕದ ಅಧ್ಯಕ್ಷ ರಮೇಶ ಬಂಗೇರ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಕಲಿಯುವ ಉತ್ಸಾಹ ಮತ್ತು ಪೂರಕವಾಗಿ ಸ್ಪಂದಿಸುವ ಸಂಪನ್ಮೂಲ ವ್ಯಕ್ತಿಗಳ ಕಾರ್ಯ ವೈಖರಿಯನ್ನು ಕಂಡು ಶಿಭಿರ ಸಂಯೋಜಿಸಿದಕ್ಕೆ ಸಾರ್ಥಕ ಭಾವನೆಯುಂಟಾಯಿತು ಎಂದರು.
ಶಿಭಿರದಲ್ಲಿ ಬಾಗವಹಿಸಿದ 78ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಪ್ರಕಾಶ್ ಪೂಜಾರಿ,ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ, ಕಾರ್ಯದರ್ಶಿ ಗೋಪೀನಾಥ ಪಡಂಗ ವೇದಿಕೆಯಲ್ಲಿದ್ದರು. ದೀಕ್ಷಾ ಸ್ವಾಗತಿಸಿ, ಅಂಕಿತಾ, ನೇಹಾ, ಲಿಖಿತ್, ನರೇಂದ್ರ ಕೆರೆಕಾಡು  ಕಾರ್ಯಕ್ರಮ ನಿರೂಪಿಸಿದರು.ಅಂಕಿತಾ ಎಸ್.ಕೋಟ್ಯಾನ್ ವಂದಿಸಿದರು.

Comments

comments

Leave a Reply

Read previous post:
ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ-ರಕ್ತದಾನ ಶಿಬಿರ

 ಕಿನ್ನಿಗೋಳಿ ಮೇ13: ತಪೋವನ, ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರೋಟರಿ ಕ್ಲಬ್, ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಇ.ಟಿ ರೋವರ್ಸ್, ಆರ್.ಸಿ.ಸಿ, ಕಾರ್ನಾಡು, ತೋಕೂರು, ನಡಿಕುದ್ರು ಮತ್ತು...

Close