ಗೋಳಿಜೋರಾ ಶ್ರೀ ರಾಮ ಯುವಕ ವೃಂದದ ವಾರ್ಷಿಕೋತ್ಸವ

Photos by Sharath Shetty

ಕಿನ್ನಿಗೋಳಿ : ಗೋಳಿ ಜೋರಾ ಶ್ರೀ ರಾಮ ಯುವಕ ವೃಂದದ 25ನೇ ವಾರ್ಷಿಕೋತ್ಸವ ಸೋಮವಾರ ನಡೆಯಿತು. ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರ ಅಧ್ಯಕ್ಷತೆಯಲ್ಲಿ ಹಿರಿಯ ರಂಗನಟ ಪುಷ್ಪರಾಜ್ ಶೆಟ್ಟಿ ಶಿಮಂತೂರರನ್ನು ಸನ್ಮಾನಿಸಲಾಯಿತು. ಲಯನ್ ಪ್ರಾಂತ್ಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಹೆಗ್ಡೆ, ಸಾಗರಿಕದ ಧನಂಜಯ ಶೆಟ್ಟಿಗಾರ್, ಯುವಕ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಹೆಗ್ಡೆ, ಕಲಾಪೋಷಕ ಜಯರಾಂ ಶೆಟ್ಟಿ ಉಪಸ್ಥಿತರಿದ್ದರು. ಯುವಕ ಸಂಘದ ಅಧ್ಯಕ್ಷ ಮನೋಜ್ ಸ್ವಾಗತಿಸಿ, ಶರತ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಕಟೀಲಿನಲ್ಲಿ ದಾದಿಯರ ದಿನಾಚರಣೆ

ಕಟೀಲು : ಕಿನ್ನಿಗೋಳಿ ರೋಟರಿಯ ನೇತೃತ್ವದಲ್ಲಿ ದಾದಿಯರ ದಿನಾಚರಣೆ ರವಿವಾರ ಕಟೀಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಕೇಂದ್ರದ ಪ್ರಮುಖ ವೈದ್ಯಾಧಿಕಾರಿ ಡಾ.ಚಂದ್ರಪ್ರಭಾ ಮಾಹಿತಿ ನೀಡಿದರು. ರೋಟರಿಯ ಪರವಾಗಿ ದಾದಿಯರನ್ನು...

Close