ವಿನಾಯಕ ಯಕ್ಷ ಕಲಾ ಮಕ್ಕಳ ಮೇಳದ ವಾರ್ಷಿಕೋತ್ಸವ

Photos by Sharath Shetty

ಕಿನ್ನಿಗೋಳಿ : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು, ಮುಲ್ಕಿ ಕೆರೆಕಾಡುವಿನ ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ 4ನೇ ವಾರ್ಷಿಕೋತ್ಸವ ರವಿವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಶಾಸಕ ಕೆ. ಅಭಯಚಂದ್ರ ಜೈನ್‌ರ ಅಧ್ಯಕ್ಷತೆಯಲ್ಲಿ ಕಲಾಪೋಷಕ ಕೆ. ಶಶೀಂದ್ರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಥಾಟಿಸಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೋ| ಎಂ. ಎಲ್ ಸಾಮಗ ಮಾತನಾಡಿ, ಅಕಾಡೆಮಿಯಲ್ಲಿ ಸದ್ಯ ಅನುದಾನದ ಕೊರತೆಯಿದ್ದು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸಹಕರಿಸುದಾಗಿ ತಿಳಿಸಿದ್ದರಲ್ಲದೆ. ಯಕ್ಷಗಾನದ ಬೆಳವಣಿಗೆಗೆ ಇಂತಹ ಮಕ್ಕಳ ಮೇಳಗಳು ಪೂರಕವೆಂದರು. ನಾರಾವಿ ಸೂರ್ಯನಾರಾಯಣ ದೇವಳದ ಪ್ರಧಾನ ಅರ್ಚಕ ವಿ. ಕೃಷ್ಣ ತಂತ್ರಿ ಆಶೀರ್ವಚನ ನೀಡಿದರೆ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಪಿ. ಸತೀಶ್ ರಾವ್, ಇ. ಶ್ರೀನಿವಾಸ ಭಟ್ , ವಿದ್ಯಾ ಕೂಳ್ಳೂರ್, ಎಡಪದವು ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮುರಳೀಧರ ಶೆಟ್ಟಿ ಮತ್ತಿತರರಿದ್ದರು, ಮಕ್ಕಳ ಮೇಳದ ಗೌರವ ಸಲಹೆಗಾರ ಕೊಲಕಾಡಿ ವಾದಿರಾಜ ಉಪದ್ಯಾಯ ಪ್ರಸ್ತಾಪಿಸಿ, ಅಧ್ಯಕ್ಷ ಜಯಂತ ಅಮೀನ್ ಸ್ವಾಗತಿಸಿದರು, ಕಾರ್ಯದರ್ಶಿ ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಮೇಳದಿಂದ ಯಕ್ಷಗಾನ, ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಎಲ್. ಕುಂಡಂತಾಯ, ಪ್ರಥ್ವಿರಾಜ್ ಕವತ್ತಾರ್, ಗಣೇಶ್ ಕೊಲಕಾಡಿ ಬಳಗದಿಂದ ತೆಂಕುತಿಟ್ಟಿನ ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ ಕುರಿತು ವಿಚಾರಗೋಷ್ಠಿ ನಡೆಯಿತು.

Comments

comments

Leave a Reply

Read previous post:
ಯುಪಿಸಿಎಲ್ ಸ್ಥಾವರ ಬಲತ್ಕಾರದ ಕಾಮಗಾರಿಕೆಗೆ ತಡೆ

Photos By Bhagyavan Sanil ಪಡುಬಿದ್ರಿ: ಸಾರ್ವಜನಿಕ ವಿರೋಧದ ನಡುವೆ ಕೆಪಿಟಿಸಿಎಲ್‌ನವರು ಯುಪಿಸಿಎಲ್ ಸ್ಥಾವರದಿಂದ ಹಾಸನಕ್ಕೆ 400ಕೆವಿ ವಿದ್ಯುತ್ ಸಾಗಾಟಕ್ಕಾಗಿ ನಿರ್ಮಿಸುತ್ತಿದ್ದ ವಿದ್ಯುತ್ ತಂತಿ ಎಳೆಯುವ ಬಲತ್ಕಾರದ...

Close