ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಳದಲ್ಲಿ ಪ್ರತಿಷ್ಠಾ ವರ್ಧಂತಿ

Photos by Sharath Shetty

ಕಿನ್ನಿಗೋಳಿ:  ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಳದಲ್ಲಿ 2ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಶುಕ್ರವಾರ ನಡೆಯಿತು. ದೇವಳದಲ್ಲಿ ಶುದ್ಧ ಕಲಶ, ಚಂಡಿಕಾಯಾಗ, ಕಲ್ಪೋಕ್ತಪೂಜೆ, ಅನ್ನಸಂತರ್ಪಣೆ, ನಡೆಯಿತು. ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಪೂಜ್ಯ ಸಾಧ್ವಿ ಅಮ್ರತಾನಂದಮಯಿ,  ಬಳ್ಕುಂಜೆ ಚರ್ಚ್‌ನ ಧರ್ಮಗುರು ರೆ| ಫಾ| ಹಿಲರಿ ಲೊಬೋ, ಅನುಗ್ರಹ ಸಂದೇಶ ನೀಡಿದರು. ಕುಡುಪು ಕ್ಷೇತ್ರದ ವಾಸ್ತು ಹಾಗೂ ಆಗಮ ತಜ್ಙಾ ಕೃಷ್ಣ ರಾಜ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮನಾಥ ಕೋಟ್ಯಾನ್, ಸುರತ್ಕಲ್‌ನ ಮಹಮ್ಮಾಯಿ ದೇವಸ್ಥಾನದ ಅನುಪಮಾ ಎ. ಪೈ, ಕ್ಷೇತ್ರದ ಅಧ್ಯಕ್ಷ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಪುರೋಹಿತ ಸುಬ್ರಮಣ್ಯ ಭಟ್, ಇಂಟಕ್‌ನ ಸದಾಶಿವ ಶೆಟ್ಟಿ, ಮತ್ತಿತರರಿದ್ದರು. ಸಮಾಜ ಸೇವಕ ಕೃಷ್ಣ ಸಾಲಿಯಾನ್, ವಾದ್ಯ ವಾದಕ ವಿಠಲ ಸೇರಿಗಾರ್, ಶಿಲ್ಪಿ ಶಂಕರ ಆಚಾರ‍್ಯ, ದೈವಗಳ ಸೇವಕ ಚಂದಯ್ಯ ಪೂಜಾರಿ, ಬಳ್ಕುಂಜೆ ವಿಠೋಭ ರುಖುಮಾಯಿ ಭಜನಾಮಂದಿರ ಮತ್ತು ದಾಮಸ್ ಕಟ್ಟೆ ಶ್ರೀ ರಾಮಕೃಷ್ಣ ಭಜನಾ ಮಂಡಳಿ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಕ್ಷೇತ್ರದ ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ ವಂದಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ತಾಳಿಪಾಡಿಗುತ್ತುವಿನಲ್ಲಿ ಪಟ್ಲ ಸತೀಶ್ ಶಟ್ಟಿಗೆ ಸನ್ಮಾನ

Photos by Sharath Shetty ಕಿನ್ನಿಗೋಳಿ: ತಾಳಿಪಾಡಿಗುತ್ತು ಶ್ರೀಮತಿ ಮತ್ತು ಶ್ರೀ ಧನಪಾಲ ಶೆಟ್ಟಿಯವರ ಕಟೀಲು ಮೇಳದ ಹರಕೆ ಬಯಲಾಟ ಗುರುವಾರ ತಾಳಿಪಾಡಿಗುತ್ತುವಿನಲ್ಲಿ ನಡೆದಾಗ ಮೇಳದ ಅಗ್ರಗಣ್ಯ...

Close