ಕೆರೆಕಾಡು – ಮಹಿಳೆಯ ಸರಸೆಳೆದು ಪರಾರಿ

Narendra Kerekadu

ಮುಲ್ಕಿ : ಮಹಿಳೆಯ ಹತ್ತಿರ ವಿಳಾಸ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸೆಳದು ಪರಾರಿಯಾದ ಘಟನೆ ಗುರುವಾರ ಬೆಳಿಗ್ಗೆ ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡಿನಲ್ಲಿ ನಡೆದಿದೆ.

ಕೆರೆಕಾಡು ನಿವಾಸಿ ದಿ.ಶಂಕರ ಸುವರ್ಣರ ಪತ್ನಿ ಕುಸುಮಾರವರು ಬೆಳಿಗ್ಗೆ ಎಂದಿನಂತೆ ಮನೆಯೊಂದರಿಂದ ಹಾಲು ತರುತ್ತಿದ್ದಾಗ ಮುಖ್ಯ ರಸ್ತೆಯಲ್ಲಿ ಇಬ್ಬರು ಒಂದೇ ಬೈಕಿನಲ್ಲಿ ಬಂದು ಅದರಲ್ಲಿ ಓರ್ವನು ಕೆಳಗಿಳಿದು ದೇವಿಪ್ರಸಾದ್ ಮನೆ ಎಲ್ಲಿ ವಿಚಾರಿಸುತ್ತಾ ಮಾತಿಗೆ ಇಳಿದ ತಕ್ಷಣ ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು ೮೦ಸಾವಿರ ಮೌಲ್ಯದ ಚಿನ್ನದ ರೋಪ್ ಚೈನನ್ನು ಸೆಳೆದು ಅದೇ ಬೈಕಿನಲ್ಲಿ ಕೆಂಚನಕೆರೆ ರಸ್ತೆಯಲ್ಲಿ ಪರಾರಿಯಾದರು ಎಂದು ದೂರು ನೀಡಿದ್ದಾರೆ.
ಕುತ್ತಿಗೆಯಿಂದ ಸರ ಸೆಳೆದು ಪರಾರಿಯಾಗುವಾಗ ಮಹಿಳೆಯನ್ನು ನೆಲಕ್ಕೆ ದೂಡಿದರಲ್ಲದೇ ತಕ್ಷಣ ಸ್ಥಳೀಯರು ಸೇರಿದರು ಕಳ್ಳರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೆ ಮುಲ್ಕಿ ಪೊಲೀಸ್ ಮೂಲಕ ಹಲವು ಕಡೆಗಳಲ್ಲಿ ತಪಾಸಣೆ ನಡೆಸಿದರು ಪ್ರಯೋಜನವಿಲ್ಲವಾಗಿದೆ ಸ್ಥಳಕ್ಕೆ ಮುಲ್ಕಿ ವೃತ್ತ ನಿರೀಕ್ಷಕ ಬಶೀರ್ ಅಹ್ಮದ್ ಭೇಟಿ ನೀಡಿದ್ದು ಇಂತಹ ನಿರ್ಜನ ಪ್ರದೇಶದಲ್ಲಿ ನಡೆಯುವಾಗ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.
ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಇಂತಹ ಸರ ಸೆಳೆತ ಪ್ರಕರಣವು ಸುಮಾರು ಎಂಟು ಕಡೆಗಳಲ್ಲಿ ನಡೆದಿದದ್ದು, ಅಂಗರಗುಡ್ಡೆ, ಕೆಂಚನಕೆರೆ ಬಳಿಯೇ ಇಂತಹ ಘಟನೆ ತಿಂಗಳ ಹಿಂದೆ ನಡೆದಿದೆ ಆದರೆ ಈವರೆಗೂ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯ ಪೊಲೀಸರಿಂದ ನಡೆದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಕೆರೆಕಾಡಿನ ಸರ ಸೆಳೆತದ ಮೂರು ದಿನಗಳ ಹಿಂದೆ ಇದೇ ರಸ್ತೆಯ ಮನೆಯೊಂದರ ಬಳಿಯಲ್ಲಿ ಯುವಕರಿಬ್ಬರು ಬೈಕಿನಲ್ಲಿ ಬಂದು ವಿಳಾಸವನ್ನು ವಿಚಾರಿಸಿದ್ದರಲ್ಲದೇ ಸಂಶಯದಲ್ಲಿಯೇ ಮನೆಯನ್ನು ನೋಡುತ್ತಿದ್ದರು ಹಾಗೂ ಬುಧವಾರ ಬೆಳಿಗ್ಗೆ ಮಹಿಳೆಯೋರ್ವರಲ್ಲಿ ವಿಳಾಸವನ್ನು ಈ ರಸ್ತೆಯಲ್ಲಿಯೇ ವಿಚಾರಿಸಿದಾಗ ಆಕೆ ಮಾತನಾಡದೇ ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ ಇದು ಕಳೆದ ಮೂರು ದಿನಗಳಿಂದ ಕಳ್ಳರು ಹೊಂಚು ಹಾಕುತ್ತಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡಿದೆ.

Comments

comments

Leave a Reply

Read previous post:
ಕಿನ್ನಿಗೋಳಿ ಪರಿಸರದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ

ಮುಲ್ಕಿ : ಇಲ್ಲಿನ ಕಿಲ್ಪಾಡಿ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ98.4ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ 60ವಿದ್ಯಾರ್ಥಿಗಳಲ್ಲಿ 18ಉನ್ನತ ಶ್ರೇಣಿ, 30ಪ್ರಥಮದರ್ಜೆ, 7ದ್ವಿತೀಯ...

Close