ತಾಳಿಪಾಡಿಗುತ್ತುವಿನಲ್ಲಿ ಪಟ್ಲ ಸತೀಶ್ ಶಟ್ಟಿಗೆ ಸನ್ಮಾನ

Photos by Sharath Shetty

ಕಿನ್ನಿಗೋಳಿ: ತಾಳಿಪಾಡಿಗುತ್ತು ಶ್ರೀಮತಿ ಮತ್ತು ಶ್ರೀ ಧನಪಾಲ ಶೆಟ್ಟಿಯವರ ಕಟೀಲು ಮೇಳದ ಹರಕೆ ಬಯಲಾಟ ಗುರುವಾರ ತಾಳಿಪಾಡಿಗುತ್ತುವಿನಲ್ಲಿ ನಡೆದಾಗ ಮೇಳದ ಅಗ್ರಗಣ್ಯ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಸನ್ಮಾನ ನೆರವೇರಿಸಿ ಆಶೀರ್ವಚನ ನೀಡಿದರು, ಯುಗಪುರುಷದ ಭುವನಾಭಿರಾಮ ಉಡುಪ, ತಾಳಿಪಾಡಿಗುತ್ತು ಚಂದ್ರಹಾಸ ಹೆಗ್ಡೆ, ಶಿಮಂತೂರಿನ ಡಾ| ನಾರಾಯಣ ಶೆಟ್ಟಿ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಐಕಳ ಕುರುಂಬಿಲ್ಗುತ್ತು ರಾಮಣ್ಣ ಶೆಟ್ಟಿ, ಐಕಳ ಮಹಾಬಲ ಶೆಟ್ಟಿ, ತಾಳಿಪಾಡಿಗುತ್ತು ಸತೀಶ್ ಹೆಗ್ಡೆ ಉಪಸ್ಥಿತರಿದ್ದರು. ಸೇವಾಕರ್ತ ತಾಳಿಪಾಡಿಗುತ್ತು ಧನಪಾಲ ಶೆಟ್ಟಿ ಸ್ವಾಗತಿಸಿ, ಯಕ್ಷಗಾನ ಕಲಾವಿದ ಸಂಜಯ್ ಕುಮಾರ್ ಅಭಿನಂದನ ಭಾಷಣ ಮಾಡಿದರು. ರಘುನಾಥ ಕಾಮತ್ ಸನ್ಮಾನ ಪತ್ರವಾಚಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
‘ಶಾಂಘೈ’ ಚಲನಚಿತ್ರ ಕುರಿತು ಸೆನ್ಸಾರ್ ಮಂಡಳಿಗೆ ಪತ್ರ

ಮುಲ್ಕಿ: ದಿವಾಕರ ಬ್ಯಾನರ್ಜಿಯವರ ನಿರ್ದೇಶನದ ಮುಂಬರುವ “ಶಾಂಘೈ" ಈ ಹಿಂದಿ ಚಲನಚಿತ್ರದ ‘ಭಾರತ ಮಾತಾಕಿ ಜೈ’ ಈ ಹಾಡಿನಲ್ಲಿ ಮಾತೃಭೂಮಿ ಭಾರತ ಮಾತೆಯನ್ನು ಅತ್ಯಂತ ಕೀಳು ಮಟ್ಟದಲ್ಲಿ...

Close