ಮುಲ್ಕಿ ಅಮಲೋದ್ಭವ ಮಾತಾ ಚರ್ಚಿನಲ್ಲಿ ಮಾತೆ ಮರಿಯಮ್ಮ ಮೂರ್ತಿ ಜೀರ್ಣೋದ್ಧಾರ

Photo by Bhagyavan Sanil

ಮುಲ್ಕಿ : ದೇವರು ಬಯಸುವುದು ನಿಷ್ಕಲ್ಮಷ ಪ್ರೀತಿ ಮಾತ್ರ ಆದರೆ ನಾವು ನಮ್ಮ ಪ್ರೀತಿಯ ಸಂಕೇತವಾಗಿ ನೀಡುವ ಕೊಡುಗೆಗಳು ನಮ್ಮ ಆತ್ಮತೃಪ್ತಿಗಾಗಿ ಎಂದು ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಫಾ.ವಲೇರಿಯನ್ ಮೆಂಡೋನ್ಸಾ ಹೇಳಿದರು.

ಗುರುವಾರ ಮುಲ್ಕಿ ಅಮಲೋದ್ಭವ ಮಾತಾ ಚರ್ಚಿನಲ್ಲಿ ಸುಮಾರು 125 ವರ್ಷ ಪುರಾತನ ಮಾತೆ ಮರಿಯಮ್ಮನವರ ಮೂರ್ತಿ ಮತ್ತು ಬೆಳ್ಳಿಯ ಕಿರೀಟವನ್ನು ಜೀರ್ಣೋದ್ಧಾರಗೊಳಿಸಿ ಪುನರ್ ಸ್ಥಾಪಿಸುವ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.

ಆಧುನಿಕ ಜೀವನ ಪದ್ದತಿಯಲ್ಲಿ ಮಮ್ಮಿ ಡ್ಯಾಡಿ ಅಥವಾ ಅಂಕಲ್ ಆಂಟಿ ಪದಗಳಿಗೆ ಸೀಮಿತ ವಾಗಿರು ಸ್ಥಿತಿಯಲ್ಲಿ 4ತಲೆಮಾರುಗಳ ಹಿಂದೆ ಪೂರ್ವಜರು ನೀಡಿರುವ ಅಮೂಲ್ಯ ಕೊಡುಗೆಯನ್ನು ಪುನರ್ ಸ್ಥಾಪನೆಗೊಳಿಸಿ ಯುವ ಪೀಳಿಗೆಗೆ ಸಂಬಂಧ ಸರಪಣಿಯ ತಿಳುವಳಿಕೆ ನೀಡುವ ಪ್ರಯತ್ನ ಶ್ಲಾಘನೀಯ ಎಂದ ಅವರು 125 ವರ್ಷಗಳ ಹಿಂದೆ ದಿ.ಆಡಂ ದಿಸೋಜಾ ಮತ್ತು ಜುವಾಂವ್ ಕುವೆಲ್ಲೋ ರವರು ತಮ್ಮ ಭಕ್ತಿಯ ಸ್ವರೂಪವಾಗಿ ನೀಡಿದ ಬೆಳ್ಳಿ ಕಿರೀಟವನ್ನು ಕುಟುಂಬಿಕರು ಸಂಘಟಿತರಾಗಿ ಪುನರ್ ಪ್ರತಿಷ್ಠಾಪನೆ ಗೊಳಿಸಿದ್ದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ  ಅಮಲೋದ್ಭವ ಮಾತಾ ಚರ್ಚಿನ ಧರ್ಮ ಗುರುಗಳಾದ ರೆ. ನೊರ್ಬಟ್  ಲೋಬೋ ವಹಿಸಿದ್ದರು.ಅತಿಥಿಯಾಗಿ ಫಾ.ಪ್ರವೀನ್ ವೇಗಸ್,ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಲಿಯೋ ಡಿಸೋಜಾ, ಸಮಿತಿಯ ಖಜಾಂಜಿ ವಿನ್ಸೆಂಟ್ ಡಿಸೋಜಾ, ಮುಂಬೈ ಸಮಿತಿಯ ಅಧ್ಯಕ್ಷ ಆಂಡ್ರೂ ಲೂವಿಸ್ ಡಿಸೋಜಾ, ಖಜಾಂಜಿ ವಿನ್ನಿಬೋಲ್ಡ್ ಕುವೆಲ್ಲೋ, ಮುಲ್ಕಿ ಅಮಲೋದ್ಭವ ಮಾತಾ ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ, ಕಾರ್ಯದರ್ಶಿ ಮೋಲಿ ಡಿಸೋಜಾ ವೇದಿಕೆಯಲ್ಲಿದ್ದರು.

ಲಿಯೋ ಡಿಸೋಜಾ ಸ್ವಾಗತಿಸಿದರು. ರಿಚಾರ್ಡ್ ಡಿಸೋಜಾ ಮತ್ತು ಪ್ರವೀಣ್ ಡಿಸೋಜಾ ಕಿರೀಟದ ಇತಿಹಾಸದ ವರದಿ ನೀಡಿದರು.
ಈ ಸಂದರ್ಭ ಹಿರಿಯ ನಾಗರೀಕರನ್ನು ಗೌರವಿಸಲಾಯಿತು. ಸಂತೋಷ್ ಡಿಸೊಜಾ ಮತ್ತು ಗ್ಲೋರಿಯಾ ಲೋಬೊ ನಿರೂಪಿಸಿದರು.ವಿನ್ಸೆಂಟ್ ಡಿಸೋಜಾ ವಂದಿಸಿದರು.
ಮೆರವಣಿಗೆ ಮತ್ತು ಪ್ರತಿಷ್ಠಾಪನೆ: ಮುಲ್ಕಿ ಕಾರ್ನಾಡು ಪೂಂಜಾ ಸಂಕೀರ್ಣದ ಬಳಿ ಫಾ.ವಲೇರಿಯನ್ ಮೆಂಡೋನ್ಸಾ ರವರು ಪ್ರಾರ್ಥಿಸಿ ಕಿರೀಟ ಶುದ್ದೀಕರಣ ಗೊಳಿಸಿ ಮಾತೆ ಮೇರಿಯವರ ಮೂರ್ತಿಗೆ ಪ್ರತಿಷ್ಠಾಪಿಸಿದ ಬಳಿಕ ಕೊಂಬು ಕಹಳೆ ಮತ್ತು ಬ್ಯಾಂಡ್ ನಿನಾದದೊಂದಿಗೆ ಬಹು ವಿಜೃಂಭಣೆಯಲ್ಲಿ ಮುಲ್ಕಿ ಅಮಲೋದ್ಭವ ಮಾತಾ ಚರ್ಚಿಗೆ ಮೆರವಣಿಗೆಯಲ್ಲಿ ತೆರಳಿದ ಬಳಿಕ ಚರ್ಚಿನಲ್ಲಿ ನೂತನವಾಗಿ ನಿರ್ಮಿಸಲಾದ ಪೀಠದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ಬಳಿಕ ಚರ್ಚಿನ ಧರ್ಮ ಗುರುಗಳಾದ ರೆ. ನೊರ್ಬಟ್  ಲೋಬೋ  ನೇತೃತ್ವದಲ್ಲಿ ನಡೆದ ಪೂಜಾ ವಿಧಿಯನ್ನು ಫಾ.ವಲೇರಿಯನ್ ಮೆಂಡೋನ್ಸಾ ನಡೆಸಿದರು. ಪಕ್ಷಿಕೆರೆ ಚರ್ಚು ಫಾ.ಸುನಿಲ್,ಫಾ.ಎಂಡ್ರೂ ಸಲ್ದಾನಾ, ಬಿಹಾರ್ ಚರ್ಚಿನ ಫಾ. ಹೆನ್ರಿ ಡಿಸೋಜಾ, ಬಸವಕಲ್ಯಾಣ ಚರ್ಚಿನ ಫಾ.ಕ್ಲಾರಿ ಡಿಸೋಜಾ, ಭೋಪಾಲ್ ಚರ್ಚಿನ ಫಾ.ವಿನ್ಸೆಂಟ್ ಸುವಾರಿಸ್,ಬರೋಡಾ ಚರ್ಚಿನ ಪ್ರವೀಣ್ ವೇಗಸ್, ಮುಲ್ಕಿ ಎಸ್‌ವಿಡಿಯ ಫಾ.ಸಿಲ್ವೆಸ್ಟರ್ ರೇಗೊ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಪರಿಸರದಲ್ಲಿ 100% ಫಲಿತಾಂಶ ಪಡೆದ ಶಾಲೆಗಳು

ಕಿನ್ನಿಗೋಳಿ: ಇಲ್ಲಿನ ಕಿನ್ನಿಗೋಳಿ ಮೂರುಕಾವೇರಿ ಕಮ್ಮಾಜೆಯ ಮೋರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶೇ100 ಫಲಿತಾಂಶ ದಾಖಲಿಸಿದ್ದಾರೆ. ಮುಲ್ಕಿ : ಇಲ್ಲಿನ ಕಾರ್ನಾಡು ಸಿ.ಎಸ್.ಐ ಶಾಲೆಯ...

Close