‘ಶಾಂಘೈ’ ಚಲನಚಿತ್ರ ಕುರಿತು ಸೆನ್ಸಾರ್ ಮಂಡಳಿಗೆ ಪತ್ರ

ಮುಲ್ಕಿ: ದಿವಾಕರ ಬ್ಯಾನರ್ಜಿಯವರ ನಿರ್ದೇಶನದ ಮುಂಬರುವ “ಶಾಂಘೈ” ಈ ಹಿಂದಿ ಚಲನಚಿತ್ರದ ‘ಭಾರತ ಮಾತಾಕಿ ಜೈ’ ಈ ಹಾಡಿನಲ್ಲಿ ಮಾತೃಭೂಮಿ ಭಾರತ ಮಾತೆಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಅಪಮಾನಿಸಲಾಗಿದೆ. ಇಮ್ರಾನ ಹಶ್ಮಿ , ಅಭಯ ಡಿಯೋಲ್ ಮತ್ತು ಬಿಪಾಶಾ ಬಸು ಅಭಿನಯದ ಈ ಚಲನಚಿತ್ರದ ಹಾಡಿನಲ್ಲಿ ಕೋಟ್ಯಾಂತರ ರಾಷ್ಟ್ರ ಭಕ್ತರ ಪ್ರೇರಣಾ ಸ್ಥಾನ ಮತ್ತು ಆರಾಧ್ಯ ದೇವರಾದ ಭಾರತಮಾತೆಯನ್ನು ಮನೋರಂಜನೆ ಮತ್ತು ಹಣಗಳಿಸುವ ಉದ್ದೇಶದಿಂದ ಅಪಮಾನ ಮಾಡಿರುವುದು ದೇಶದ್ರೋಹದ ಅಪರಾಧವಾಗಿದೆ.
ಹಾಗಾಗಿ ಹಿಂದೂ ಜನಜಾಗೃತಿ ಸಮಿತಿಯು ಈ ಚಲನಚಿತ್ರದ ಈ ಹಾಡಿನಲ್ಲಿ ಭಾರತ ಮಾತೆಯ ಅಪಮಾನವನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಕೂಡಲೇ ಈ ಹಾಡನ್ನು ತೆಗೆದು ಹಾಕಬೇಕೆಂದು ತೀವ್ರವಾಗಿ ಆಗ್ರಹಿಸುತ್ತದೆ. ಸಮಿತಿಯ ವತಿಯಿಂದ ಈಗಾಗಲೇ ಮುಂಬೈ ಸೆನ್ಸಾರ್ ಮಂಡಳಿಗೆ ಪತ್ರವನ್ನು ಬರೆದಿದ್ದು, ಶಾಂಘೈ ಈ ಚಿತ್ರಕ್ಕೆ ಸೆನ್ಸರ್ ಪತ್ರವನ್ನು ನೀಡದಂತೆ ಆಗ್ರಹಿಸಿದೆ. ಅಷ್ಟೇ ಅಲ್ಲದೇ ಈ ಸಿನೆಮಾ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನ ಮಾಡಲಿದೆ. ಎಂದು ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Leave a Reply

Read previous post:
ಮುಲ್ಕಿ ಅಮಲೋದ್ಭವ ಮಾತಾ ಚರ್ಚಿನಲ್ಲಿ ಮಾತೆ ಮರಿಯಮ್ಮ ಮೂರ್ತಿ ಜೀರ್ಣೋದ್ಧಾರ

Photo by Bhagyavan Sanil ಮುಲ್ಕಿ : ದೇವರು ಬಯಸುವುದು ನಿಷ್ಕಲ್ಮಷ ಪ್ರೀತಿ ಮಾತ್ರ ಆದರೆ ನಾವು ನಮ್ಮ ಪ್ರೀತಿಯ ಸಂಕೇತವಾಗಿ ನೀಡುವ ಕೊಡುಗೆಗಳು ನಮ್ಮ ಆತ್ಮತೃಪ್ತಿಗಾಗಿ...

Close