ಎಸ್.ಎಸ್.ಎಲ್.ಸಿ ಫಲಿತಾಂಶದಿಂದ ವಿದ್ಯಾರ್ಥಿಯ ದುರ್ಮರಣ..!

Narendra Kerekadu

ಮುಲ್ಕಿ; ನಿನ್ನೆಯಷ್ಟೇ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಫಲಿತಾಂಶವು ವಿದ್ಯಾರ್ಥಿಯೊಬ್ಬನನ್ನು ಬಲಿ ತೆಗೆದುಕೊಂಡ ಹೃದಯವಿದ್ರಾವಕ ಘಟನೆ ಮೂಲ್ಕಿ ಬಳಿಯಲ್ಲಿ ನಡೆದಿದೆ.
ಮುಲ್ಕಿ ಕವತ್ತಾರು ನೆಲಗುಡ್ಡೆಯ ನಿವಾಸಿ ದಿ.ವಿಠಲ ಪೂಜಾರಿ ಎಂಬುವವರ ಮಗ ವಿಶ್ವಾಸ್ ಪೂಜಾರಿ(16) ಎಂಬ ವಿದ್ಯಾರ್ಥಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು ಶುಕ್ರವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿಯಲ್ಲಿ ತಾನು ಅನುತ್ತೀರ್ಣನಾದೆ ಎಂದು ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ದಿ.ವಿಠಲ ಪೂಜಾರಿಗೆ ಮೂವರು ಗಂಡು ಮಕ್ಕಳಿದ್ದು ಮೊದಲನೆಯವ ಮಿಥುನ್‌ರಾಜ್ ಪೂಜಾರಿ ಮಂಗಳೂರಿನ ಕೆಪಿಟಿಯಲ್ಲಿ ಎಲೆಕ್ಟ್ರಿಕಲ್ ಡಿಪ್ಲೋಮಾ ಕಲಿಯುತ್ತಿದ್ದಾನೆ. ಎರಡನೆ ಮಗನೇ ವಿಶ್ವಾಸ್ ಪೂಜಾರಿ ಆಗಿದ್ದು, ಮೂರನೇಯವ ವಿಜೇತ ಪೂಜಾರಿ ಮೈಲೊಟ್ಟು ಪಂಜಿನಡ್ಕದ ಕೆಪಿಎಸ್‌ಕೆ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಮೃತ ವಿಶ್ವಾಸ್ ಪೂಜಾರಿ ಈ ಹಿಂದೆ 2011ರಲ್ಲಿ ಪಂಜಿನಡ್ಕದ ಕೆಪಿಎಸ್‌ಕೆ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿದ್ದಾಗ ನಾಲ್ಕು ವಿಷಯದಲ್ಲಿ ಅನುತ್ತೀರ್ಣವಾಗಿದ್ದನು ನಂತರ ಮರಳಿ ಮುಲ್ಕಿ ಬಪ್ಪನಾಡುವಿನ ಬ್ರಿಲಿಯಂಟ್ ಟುಟೋರಿಯಲ್‌ನ ಮೂಲಕ ಖಾಸಗಿಯಾಗಿ ಎಸ್.ಎಸ್.ಎಲ್.ಸಿಗೆ ಸೇರಿದ್ದನು ಶುಕ್ರವಾರ ಅದರ ಫಲಿತಾಂಶ ಪ್ರಕಟಗೊಂಡಾಗ ಅನುತೀರ್ಣನಾದದುದರಿಂದ ಮನನೊಂದು ಮನೆಯ ಪಕ್ಕಾಸಿಗೆ ಶಾಲಿನ ಮೂಲಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ತಾಯಿ ಸುಜಾತರವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದು ಸಹೋದರರಿಬ್ಬರು ಸಹ ಹೊರಗೆ ಹೋಗಿದ್ದಾಗ ಒಂಟಿಯಾಗಿದ್ದ ಸಮಯದಲ್ಲಿ ಈ ಕೃತ್ಯ ನಡೆಸಿದ್ದು ಸಂಜೆ ತಾಯಿ ಮರಳಿ ಮನೆಗೆ ಬಂದಾಗ ಆತ್ನಹತ್ಯೆಯ ಬಗ್ಗೆ ತಿಳಿದು ಬಂದಿತು.

Comments

comments

Leave a Reply

Read previous post:
ಕೆರೆಕಾಡು – ಮಹಿಳೆಯ ಸರಸೆಳೆದು ಪರಾರಿ

Narendra Kerekadu ಮುಲ್ಕಿ : ಮಹಿಳೆಯ ಹತ್ತಿರ ವಿಳಾಸ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸೆಳದು ಪರಾರಿಯಾದ ಘಟನೆ ಗುರುವಾರ ಬೆಳಿಗ್ಗೆ ಮೂಲ್ಕಿ ಠಾಣಾ ವ್ಯಾಪ್ತಿಯ...

Close