ವಿಷ್ಣು ಸಹಸ್ರ ನಾಮ ಪಠಣ ಶಿಬಿರದ ಸಮಾರೋಪ

ಕಿನ್ನಿಗೋಳಿ: ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ನೈತಿಕ ಮೌಲ್ಯಯುತವಾದ ಸಂಸ್ಕೃತಿಯ ಆಚಾರ, ವಿಚಾರಗಳ ಪುರಾಣ ಗ್ರಂಥಗಳನ್ನು ತಿಳಿಸುವ ಶಿಬಿರಗಳ ಅಗತ್ಯವಿದೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಇತ್ತೀಚೆಗೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ನಿತ್ಯವಂದನೆ, ವಿಷ್ಣು ಸಹಸ್ರನಾಮ ಪಠಣ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಾಠದ ಗುರುಗಳಾದ ಸುಬ್ರಹ್ಮಣ್ಯ ಭಟ್ ತೋಕೂರು ಅವರನ್ನು ಸಮ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕ ವಿತರಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ ರಾವ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಇ.ರಾಮಚಂದ್ರ ಭಟ್, ಸುರೇಶ್ ರಾವ್ ಪುನರೂರು, ರಾಮ್ ಭಟ್ ಉಪಸ್ಥಿತರಿದ್ದರು. ಪಟೇಲ್ ವಾಸುದೇವ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ವಂದಿಸಿದರು.

Comments

comments

Leave a Reply

Read previous post:
ಗಿಡಿಗೆರೆ – ಕಾಂಕ್ರೀಟು ರಸ್ತೆ ಉದ್ಘಾಟನೆ

Photo by Mithuna Kodethoor ಕಟೀಲು: ಕಟೀಲು ಗಿಡಿಗೆರೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ರೂ. ಐದು ಲಕ್ಷದಲ್ಲಿ ನಿರ್ಮಾಣಗೊಂಡ ಕಾಂಕ್ರೀಟು ರಸ್ತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್...

Close