ತಾಳಿಪಾಡಿ ಗ್ರಾಮದ ಕುಂರ್ಬಿಲ್ ಎಂಬಲ್ಲಿ ಕಳವು

News & Photo by  Lionel Pinto, Kinnigoli.

ಕಿನ್ನಿಗೋಳಿ: ತಾಳಿಪಾಡಿ ಗ್ರಾಮದ ಕುಂರ್ಬಿಲ್ ಎಂಬಲ್ಲಿ ಎಲಿಯಾಸ್ ಮಥಾಯಸ್ ಅವರ ಮನೆಯ ಹಿಂದಿನ ಬಾಗಿಲನ್ನು ಮುರಿದು ಮನೆಯೊಳಗಿದ್ದ ಸುಮಾರು 22000 ಸಾವಿರ ಮೌಲ್ಯದ ನಗದು, ಬಟ್ಟೆ, ಹಿತ್ತಾಳೆ ಮತ್ತು ತಾಮ್ರದ ಕಳವು ನಡೆದಿರುವುದಾಗಿ ದೂರು ದಾಖಲಾಗಿದೆ. ಎಲಿಯಾಸ್ ಮಥಾಯಸ್ ಅವರು ಮುಂಬಾಯಿಯಲ್ಲಿ ನೆಲೆಸಿದ್ದು ಮನೆಯ ಶುಚಿತ್ವ ಮತ್ತು ಮರ ಗಿಡಗಳಿಗೆ ನೀರು ಕೊಡುವ ಕೆಲಸ 2 ದಿನಗಳಿಗೊಮ್ಮೆ ಮಾಡಿಕೊಂಡಿದ್ದ ಜೋಸೆಫ್ ಪೀಟರ್ ಡಿಸೋಜ ದೂರು ನೀಡಿರುತ್ತಾರೆ. ಮೇ18 ರ ನಂತರ 20 ರಂದು ಮನೆಗೆ ಬಂದಾಗ ಕಳವು ನಡೆದಿರುವುದಾಗಿ ತಿಳಿದು ಬಂದಿದೆ. ಮನೆಯೊಳಗಿನ ತಾಮ್ರ ಮತ್ತು ಹಿತ್ತಾಳೆಯ ನೀರಿನ ನಳ್ಳಿ, ಕಪಾಟಿನ ಒಳಗಿದ್ದ ರೂ. 7000 ನಗದು, ಸೀರೆ ಗ್ಯಾಸ್ ಸ್ಟವ್ ನ ಹಿತ್ತಾಳೆ ಬರ್ನರ್ ಇತ್ಯಾದಿಗಳು ಕಳವು ಆಗಿರುವುದಾಗಿ ಫೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.

Comments

comments

Leave a Reply

Read previous post:
Rotary English Medium HighSchool Kinnigoli Toppers

                                     Sujan (94%)...

Close