ಕಟೀಲು ಪದವಿ ಪೂರ್ವ ಕಾಲೇಜು ಪಿಯುಸಿ 95.17% ಫಲಿತಾಂಶ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಪಿಯುಸಿಯಲ್ಲಿ 95.17% ಫಲಿತಾಂಶ ದಾಖಲಿಸಿದೆ. 352 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿಜ್ಞಾನ ವಿಭಾಗದಲ್ಲಿ 88 ರಲ್ಲಿ 85, ವಾಣಿಜ್ಯ ವಿಭಾಗದಲ್ಲಿ 162 ರಲ್ಲಿ 160 ಮತ್ತು ಕಲಾ ವಿಭಾಗದಲ್ಲಿ 102 ರಲ್ಲಿ 90ಮಂದಿ ತೇರ್ಗಡೆ ಹೊಂದಿದ್ದಾರೆ. 33 ಅತ್ಯನ್ನತ ಶ್ರೇಣಿ, 187 ಪ್ರಥಮ ದರ್ಜೆ, 74 ದ್ವಿತೀಯ ದರ್ಜೆ, 41 ತೃತೀಯ ದರ್ಜೆ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅನಿಶಾ ಡಿಸೋಜ (575), ವಾಣಿಜ್ಯ ವಿಭಾಗದಲ್ಲಿ ಶ್ರೀ ವಿದ್ಯಾ (562) ಕಲಾ ವಿಭಾಗದಲ್ಲಿ ಪವಿತ್ರ (513) ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ ಎಂದು ಪ್ರಾಚಾರ್ಯ ಜಯರಾಮ ಪೂಂಜ ತಿಳಿಸಿದ್ದಾರೆ.

Comments

comments

Leave a Reply

Read previous post:
ಕಿನ್ನಿಗೋಳಿ-ವ್ಯಾಸ ರಘುಪತಿ ದೇವರ ರಥ ಯಾತ್ರೆ

Photo by Raghunath Kamath ಕಿನ್ನಿಗೋಳಿ: ಕಾಶೀಮಠ ಸಂಸ್ಥಾನದ ವ್ಯಾಸ ರಘುಪತಿ ದೇವರ ರಥ ಯಾತ್ರೆ ಕಿನ್ನಿಗೋಳಿ ಶ್ರೀ ರಾಮ ಮಂದಿರಕ್ಕೆ ಆಗಮಿಸಿದ್ದು ಕಿನ್ನಿಗೋಳಿ ಜಿ.ಎಸ್. ಬಿ....

Close