ಕಟೀಲು ದೇವಸ್ಥಾನ – ರಜತ ದ್ವಾರಗಳ ಕೊಡುಗೆ

Photo by Mithuna Kodethoor

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಗರ್ಭಗುಡಿಯ ಹೊರಭಾಗದ ಎಡ ಹಾಗೂ ಬಲ ಬದಿಯ ಎರಡು ದ್ವಾರಗಳಿಗೆ ದಾನಿಗಳ ಕೊಡುಗೆಯಿಂದ ಸುಮಾರು ಹನ್ನೆರಡು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಜತ ದ್ವಾರಗಳನ್ನು ಮೇ25 ರ ಸಂಜೆಸಮರ್ಪಿಸಲಾಯಿತು. ಈ ಸಂದರ್ಭ ಕಟೀಲು ದೇವಸ್ಥಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ವೇದವ್ಯಾಸ ತಂತ್ರಿ, ದಾನಿಗಳಾದ ಉದ್ಯಮಿ ಶ್ರೀಧರ ಕೋಟ್ಯಾನ್ ಮುಂಬಯಿ, ಕರುಣಾಕರ ಶೆಟ್ಟಿ ಉದ್ಯಮಿ ಮುಂಬಯಿ, ಕೊಲ್ನಾಡು ಮೋಹನ್ ಶೆಟ್ಟಿ, ಶುಭಕರ ಶೆಟ್ಟಿ ಮುಂಬಯಿ, ರಾಧಾಬಾಯಿ ಬಜಪೆ, ಎ. ಸುಬ್ರಹ್ಮಣ್ಯ ರಾವ್ ಬೆಂಗಳೂರು, ಶೇಖರ ಕೋಟ್ಯಾನ್  ಮತ್ತಿತರರು ಉಪಸ್ಥಿತರಿದ್ದರು. ಕಿನ್ನಿಗೋಳಿಯ ನ್ಯೂ ರಾಜಶ್ರೀ ಜುವೆಲ್ಲರ್ಸ್ ನ ಬಿ.ಡಿ. ರಾಮಚಂದ್ರ ಆಚಾರ್ಯ ರಜತ ದ್ವಾರ ನಿರ್ಮಿಸಿದ್ದಾರೆ.

Comments

comments

Leave a Reply

Read previous post:
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

Photo

Close