ಆಟದಿಂದ……………. ಪಾಠದೆಡೆಗೆ!

ಮೊನ್ನೆ ಮೊನ್ನೆಯಷ್ಟೇ ರಜಾ ಶುರುವಾದ ಹಾಗಿತ್ತು…. ಎಷ್ಟು ಬೇಗ ಕಳೆದೋಗುತ್ತೆ ದಿನಗಳು…! ಇಷ್ಟುದಿನ ಅಪ್ಪ, ಅಮ್ಮನ ಮಡಿಲಲ್ಲಿ ಹೊರಗಿನ ಪ್ರಪಂಚದ ಅರಿವಿಲ್ಲದೆ ಕುಳಿತಿರುತ್ತಿದ್ದ ಮಕ್ಕಳಿಗೆ ಹೊಸ ತರಗತಿಗೆ ಕಾಲಿಡುತ್ತಿದ್ದಂತೆಯೇ ಏನೋ ಸ್ವಲ್ಪ ದೊಡ್ಡವನಾಗಿದ್ದೀನಿ ಅನ್ನೋ ಪುಟ್ಟ ಗರ್ವ..!
ಹೊಸ ಲೋಕಕ್ಕೆ ಕಾಲಿಟ್ಟ ಅನುಭವ…. ಹೊಸ ಪ್ರಪಂಚಕ್ಕೆ ಮೈಯೊಡ್ಡುವ ತವಕ..! ಇಂದು ಮೇ 30 ಮತ್ತೆ ಶಾಲೆ ಆರಂಭವಾಗಿದೆ… ಇನ್ನೇನು ತುಂತುರು ಮಳೆಯು ಆರಂಭವಾಗುತ್ತದೆ. ಪುಟ್ಟ ಪುಟ್ಟ ಮಕ್ಕಳು ಛತ್ರಿ ಹಿಡಿದು,ಯೂನಿಫಾರ್ಮ್ ತೊಟ್ಟು, ಶಿಸ್ತಿನಿಂದ ಶಾಲೆಗೆ ಹೋಗುವುದನ್ನು ನೋಡುವುದೇ ಒಂಥರಾ ಹಬ್ಬ. 

Comments

comments

Leave a Reply

Read previous post:
ಮಾನ್ಸೂನ್ ಮಳೆ 2012

ಜೂನ್ ನಿಂದ ಸೆಪ್ಟಂಬರ್ ವರೆಗೆ ಉಂಟಾಗುವ ನೈರುತ್ಯ ಮಾನ್ಸೂನ್ ಕಾಲ

Close