ಕಿನ್ನಿಗೋಳಿ ರೋಟರಿ ಕ್ಲಬ್ ಗೆ 5 ಜಿಲ್ಲಾ ಪ್ರಶಸ್ತಿ

ಕಿನ್ನಿಗೋಳಿ : ಮೈಸೂರಿನಲ್ಲಿ ನಡೆದ “ಆರೋಹಣ” ಜಿಲ್ಲಾ ಸಮಾವೇಶ ಮತ್ತು ಜಿಲ್ಲಾ ಪ್ರಶಸ್ತಿ ಸಮಾರಂಭದಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಗೆ 5 ಜಿಲ್ಲಾ ಪ್ರಶಸ್ತಿ ದೊರಕಿದೆ. ರೋಟರಾಕ್ಟ್ಗೆ ಪ್ರಥಮ, ಹೊಸ ಪೀಳಿಗೆ ಉತ್ತಮ ಕ್ಲಬ್‌ನಲ್ಲಿ ದ್ವಿತೀಯ, ಏಡ್ಸ್ ತಿಳುವಳಿಕೆ ಮತ್ತು ತಡೆಗಟ್ಟುವಿಕೆ ವಿಭಾಗದಲ್ಲಿ ತೃತೀಯ, ಇಂಟರಾಕ್ಟ್ ಗೆ ತೃತೀಯ, ರೋಟರಿ ಗ್ರಾಮಿಣ ದಳಕ್ಕೆ ತೃತೀಯ ಪ್ರಶಸ್ತಿ ಲಭಿಸಿದೆ.
ಜಿಲ್ಲಾ ಗವರ್ನರ್ ಎಚ್. ಎಲ್. ರವಿ, ನಿಯೋಜಿತ ಜಿಲ್ಲಾ ಗವರ್ನರ್ ದೇವದಾಸ್ ರೈ, ನಿಕಟ ಪೂರ್ವ ಜಿಲ್ಲಾ ಗವರ್ನರ್ ಜ್ಞಾನ ವಸಂತ ಶೆಟ್ಟಿ, ಉಪ ಗವರ್ನರ್ ಕೆ. ಆರ್ ಪಾಟ್ಕರ್, ವಲಯ ಸೇನಾನಿ ಹೆರಿಕ್ ಪಾಯಸ್,ಕಿನ್ನಿಗೋಳಿ ರೋಟರಿ ಅಧ್ಯಕ್ಷ ಜಯರಾಮ ಪೂಂಜ, ಕಾರ್ಯದರ್ಶಿ ಯಶವಂತ ಎ., ಕೆ. ಬಾಲಕೃಷ್ಣ ಶೆಟ್ಟಿ, ಪಿ. ಸತೀಶ್ ರಾವ್, ಜೆರಾಲ್ಡ್ ಮೆನೇಜಸ್ ಮತ್ತು ಶರತ್ ಶೆಟ್ಟಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ನೆಮ್ಮದಿ ಕೇಂದ್ರ ಬಂದ್..?

Photo by Narendra Kerekadu ಮುಲ್ಕಿ : ಅಂಗಡಿ ಮಾಲೀಕರ ಮತ್ತು ಸರ್ಕಾರದ ಪರವಾಗಿರುವ ಏಜೆನ್ಸಿಯೊಂದರ ಮುಸುಕಿನ ಗುದ್ದಾಟದಿಂದ ಸಾರ್ವಜನಿಕರಿಗೆ ನೆರವಾಗುವ ನೆಮ್ಮದಿ ಕೇಂದ್ರವು ಅಡಕತ್ತರಿಯಲ್ಲಿ ಸಿಲುಕಿಕೊಂಡು...

Close