ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಗೀತಾ ವೆಂಕಟರಮಣರಿಗೆ ಬೀಳ್ಕೊಡುಗೆ

ಕಿನ್ನಿಗೋಳಿ : ಜೂನ್ : ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತೋಕೂರು ತಪೋವನ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತಿಯನ್ನು ಹೊಂದಿದ ಶ್ರೀಮತಿ ಗೀತಾ ವೆಂಕಟರಮಣರವರಿಗೆ ಶಾಲೆಯ ಶಿಕ್ಷಕ ರಕ್ಷಕ ಸಂಘದ ಸಂಯೋಜನೆಯಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಗೀತಾ ವೆಂಕಟರಮಣರವರು ಶಿಕ್ಷಣ ಸಂಸ್ಥೆ ನನ್ನ ಉಸಿರಾಗಿದ್ದು ನಿವೃತ್ತಿ ಹೊಂದಿದರು ನಾನು ನಿಮ್ಮ ಪ್ರೀತಿ ವಿಶ್ವಾಸವನ್ನು ಪಡೆಯಲು ಸಂಸ್ಥೆಗೆ ಭೇಟಿ ನೀಡುವೆ ಎಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜಾ ಪತ್ರವೋ ಮಾತನಾಡಿ ಶಿಕ್ಷಣದ ಬಗ್ಗೆ ಅಪಾರ ಗೌರವ ಇರುವ ಈ ಸಂಸ್ಥೆಯಲ್ಲಿ ಮಕ್ಕಳು ತಮ್ಮ ಫ್ರೌಢಿಮೆಯನ್ನು ಬೆಳಿಸಿಕೊಳ್ಳುವ ಎಲ್ಲಾ ಅವಕಾಶವನ್ನು ನೀಡಿದ್ದಾರೆ ಅದಕ್ಕೆ ಗೀತಾ ವೆಂಕಟರಮಣರವರು ಪ್ರೇರಕ ಶಕ್ತಿಯಾಗಿದ್ದರು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕೇಂದ್ರ ಪಠ್ಯ ಕ್ರಮದಲ್ಲಿನ ಸಿ.ಬಿ.ಎಸ್.ಇ ಪರೀಕ್ಷೆಯ ಎಸ್.ಎಸ್.ಎಲ್.ಸಿ.ಯಲ್ಲಿ ಶೇ ನೂರು ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿ ಹರ್ಷಿತ್ ಶೆಟ್ಟಿಯವರನ್ನು ವಿಶೇಷವಾಗಿ ಗೌರವಿಸಲಾಯಿತು.
ನೂತನ ಮುಖ್ಯೋಪಾಧ್ಯಾಯಿನಿ ಶ್ರೀಲತಾ ರಾವ್, ಶಿಕ್ಷಕ ರಕ್ಷಕ ಸಂಘದ ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ, ಯಾದವ ದೇವಾಡಿಗ ಹಳೆಯಂಗಡಿ, ಮಮತಾ ಶೆಟ್ಟಿ, ಸರಸ್ವತಿ ಶೆಟ್ಟಿ, ಪುಷ್ಪಾವತಿ ಶೆಟ್ಟಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಆಸ್ಪತ್ರೆಗೆ ಹೊರಟವರು ಮಸಣ ಸೇರಿದರು

Photo by Narendra Kerekadu ಮುಲ್ಕಿ; ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಳಿಯ ಕೊಲ್ನಾಡು ಎಂಬಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಪತಿ, ಪತ್ನಿ...

Close