ಮುಲ್ಕಿ ನೆಮ್ಮದಿ ಕೇಂದ್ರ ಬಂದ್..?

Photo by Narendra Kerekadu
ಮುಲ್ಕಿ : ಅಂಗಡಿ ಮಾಲೀಕರ ಮತ್ತು ಸರ್ಕಾರದ ಪರವಾಗಿರುವ ಏಜೆನ್ಸಿಯೊಂದರ ಮುಸುಕಿನ ಗುದ್ದಾಟದಿಂದ ಸಾರ್ವಜನಿಕರಿಗೆ ನೆರವಾಗುವ ನೆಮ್ಮದಿ ಕೇಂದ್ರವು ಅಡಕತ್ತರಿಯಲ್ಲಿ ಸಿಲುಕಿಕೊಂಡು ಬಂದ್ ಆಗಿ ಮತ್ತೆ ಚಾಲನೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯಾದ್ಯಾಂತ ನೆಮ್ಮದಿಯನ್ನು ಕೆಡಿಸಿರುವ ಸಂಸ್ಥೆಯೆಂದೇ ಗುರುತಿಸಿರುವಂತೆ ಮುಲ್ಕಿಯಲ್ಲಿನ ನೆಮ್ಮದಿ ಕೇಂದ್ರದಲ್ಲಿ ದೂರಗಳಿದ್ದರು ತಕ್ಕಮಟ್ಟಿಗೆ ಸೇವೆಯು ಸಿಗುತ್ತಿದ್ದು ಕಾರ್ನಾಡು ಚರಂತಿ ಪೇಟೆಯ ಭೂಷಣ್ ಕಾಂಪ್ಲೆಕ್ಸ್‌ನಲ್ಲಿ ಕಾಯಾಚರಿಸುತ್ತಿದೆ.
ಖಾಸಗಿ ಏಜೆನ್ಸಿ ಮತ್ತು ಕಟ್ಟಡ ಮಾಲೀಕರ ಬಾಡಿಗೆ ಕರಾರಿನಂತೆ ಈ ವರೆಗೆ ನಡೆಯುತ್ತಿತ್ತು ಆದರೆ ಮೇ ತಿಂಗಳವರೆಗೆ ಮಾತ್ರ ಒಪ್ಪಂದ ಇದ್ದುರಿಂದ ಅದನ್ನು ನವೀಕರಿಸಿಲ್ಲ ಮತ್ತು ಕೆಲವು ತಿಂಗಳ ಬಾಡಿಗೆಯನ್ನು ಕೊಟ್ಟಿಲ್ಲ ಎಂದು ಕಟ್ಟಡ ಮಾಲೀಕರು ಏಕಾಏಕಿ ನೆಮ್ಮದಿ ಕೇಂದ್ರಕ್ಕೆ ಬೀಗ ಜಡಿದೇ ಬಿಟ್ಟರು.
ನೆಮ್ಮದಿ ಕೇಂದ್ರದ ಸಿಬ್ಬಂದಿಗಳು ಸಹ ಕೆಲಸ ಬಿಟ್ಟರು ಇವರಿಗೆ ಕೆಲವು ತಿಂಗಳ ಸಂಭಳ ಬಾಕಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ನಂತರ ಮುಲ್ಕಿ ಕಂದಾಯ ನಿರೀಕ್ಷಕರು ವಿನಂತಿಸಿದರು ಕ್ಯಾರೆ ಮಾಡದ ಕಟ್ಟಡ ಮಾಲೀಕರು, ಕೊನೆಗೆ ವಿವಾದದ ಚೆಂಡು ಮಂಗಳೂರಿನ ತಹಶೀಲ್ದಾರರ ಕಚೇರಿಗೆ ಬಿದ್ದ್ದಿತು ಅದರಂತೆ ಸೋಮವಾರ ಕೇಂದ್ರವನ್ನು ತಹಶೀಲ್ದಾರರ ಆದೇಶದಂತೆ ಬಲವಂತವಾಗಿ ತೆಗೆದಿದ್ದು ಇಲಾಖೆಯ ಅಧಿಕಾರಿಗಳ ಹಾಗೂ ಕಟ್ಟಡ ಮಾಲೀಕರ ನಡುವೆ ಜಟಾಪಟಿ ನಡೆದಿದ್ದು ಕೊನೆಗೆ ನೆಮ್ಮದಿ ಕೇಂದ್ರವನ್ನೇ ಬದಲಿಸುವ ನಿರ್ಧಾರ ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಿದ್ದು ಬಪ್ಪನಾಡು ಬಳಿಯ ಕಟ್ಟಡವೊಂದರಲ್ಲಿ ಕಾರ್ಯಾಚರಿಸಲಿದೆ ಎಂದು ತಿಳಿದು ಬಂದಿದೆ.
ಸಿಬ್ಬಂದಿಗಳ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಪ್ರಯತ್ನ ಸಾಗಿದ್ದು ಕಳೆದ ಮೇ೨೨ರಂದು ರಾಜ್ಯಾದ್ಯಂತ ನೆಮ್ಮದಿ ಕೇಂದ್ರ ಸಿಬ್ಬಂದಿಗಳು ಮುಷ್ಕರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂತೂ ನೆಮ್ಮದಿ ಕೇಂದ್ರ ಜನರೊಂದಿಗೆ ಈಗ ಅಧಿಕಾರಿಗಳಿಗೂ ನೆಮ್ಮದಿ ಕೆಡಿಸಿದೆ.

 

Comments

comments

Leave a Reply

Read previous post:
ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಗೀತಾ ವೆಂಕಟರಮಣರಿಗೆ ಬೀಳ್ಕೊಡುಗೆ

ಕಿನ್ನಿಗೋಳಿ : ಜೂನ್ : ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತೋಕೂರು ತಪೋವನ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತಿಯನ್ನು ಹೊಂದಿದ ಶ್ರೀಮತಿ...

Close