ಉಲ್ಲಂಜೆ ಶಾಲೆಯಲ್ಲಿ 6ನೇ ವರ್ಷದ ಯಕ್ಷಗಾನ, ಯೋಗ, ಸಂಗೀತ, ನೃತ್ಯ ತರಗತಿಗಳ ಉದ್ಘಾಟನೆ

Photos By Mithuna Kodethoor

ಕಿನ್ನಿಗೋಳಿ : ಸರಕಾರಿ ಶಾಲೆಗಳಲ್ಲೀಗ ಅತ್ಯುತ್ತಮ ಸವಲತ್ತುಗಳು ವಿದ್ಯಾರ್ಥಿಗಳಿಗೆ ಸಿಗುತ್ತಿದ್ದು, ಕನ್ನಡ ಮಾಧ್ಯಮದಲ್ಲಿ ಕಲಿತವರೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಹಾಗಾಗಿ ಕನ್ನಡ ಮತ್ತು ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಬೇಡ ಎಂದು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಹೇಳಿದರು.
ಅವರು ಮಂಗಳವಾರ ಅನಂತ ಪ್ರಕಾಶ ಹಾಗೂ ಯಕ್ಷನಾದ ಕೊಡೆತ್ತೂರು ಸಂಸ್ಥೆಗಳ ಆಸರೆಯಲ್ಲಿ ಉಲ್ಲಂಜೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಆರನೆಯ ವರ್ಷದ ಯಕ್ಷಗಾನ, ಯೋಗ, ಸಂಗೀತ, ನೃತ್ಯ ತರಗತಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಶಾಲೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ಲಲಿತಕಲೆಗಳ ಅಭ್ಯಾಸದಿಂದ ಸಿಗುತ್ತದೆ ಎಂದರು. ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಶಕುನ ಉಡುಪ, ಶಿಕ್ಷಕರಾದ ಹರಿರಾಜ್, ರಾಜೇಶ್ ಕಟೀಲ್, ರವಿ ಕೆ., ಶಾಲಾಭಿವೃದ್ಧಿ ಸಮಿತಿಯ ದಯಾನಂದ್ ಮತ್ತಿತರರಿದ್ದರು.
ಮುಖ್ಯ ಶಿಕ್ಷಕಿ ಮಂಗಳಾ ಎಸ್. ಭಟ್ ಪ್ರಸ್ತಾವನೆಗೈದರು. ಶಿಕ್ಷಕಿ ಜೆಸಿಂತಾ ಡಿಸೋಜ ಸ್ವಾಗತಿಸಿದರು. ಸರೋಫಿ ಜ್ಯೂಲಿಯಟ್ ವಂದಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿ ಕ್ಲಬ್ ಗೆ 5 ಜಿಲ್ಲಾ ಪ್ರಶಸ್ತಿ

ಕಿನ್ನಿಗೋಳಿ : ಮೈಸೂರಿನಲ್ಲಿ ನಡೆದ "ಆರೋಹಣ" ಜಿಲ್ಲಾ ಸಮಾವೇಶ ಮತ್ತು ಜಿಲ್ಲಾ ಪ್ರಶಸ್ತಿ ಸಮಾರಂಭದಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಗೆ 5 ಜಿಲ್ಲಾ ಪ್ರಶಸ್ತಿ ದೊರಕಿದೆ. ರೋಟರಾಕ್ಟ್ಗೆ...

Close