ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ; ಐವನ್ ಡಿಸೋಜಾ

Narendra Kerekadu

ಮುಲ್ಕಿ : ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಬಿಜೆಪಿ ಸೋಲಿನ ಭೀತಿಯಲ್ಲಿ ಇರುವುದರಿಂದ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಮುಖ್ಯ ಮಂತ್ರಿಯವರೆಗೆ ಇರುವವರು ಮತಯಾಚನೆ ಮಾಡುತ್ತಿರುವುದೇ ಪ್ರತ್ಯಕ್ಷ ಸಾಕ್ಷ, ಭ್ರಷ್ಟ ಸರ್ಕಾರವನ್ನು ಕೊನೆಗಾಣಿಸಬೇಕಾದರೆ ಯುವಜನತೆ, ಶಿಕ್ಷಕರು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೇಸನ್ನು ಬೆಂಬಲಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ಸಿನ ಉಪಾಧ್ಯಕ್ಷ ಐವನ್ ಡಿಸೋಜಾ ಕರೆ ನೀಡಿದರು.
ಮುಲ್ಕಿಯಲ್ಲಿ ಮಂಗಳವಾರ ರಾಜ್ಯ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಗಳ ಪರವಾಗಿ ಮುಲ್ಕಿಯ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಿದಲ್ಲಿದ್ದರೂ ಶಿಕ್ಷಕರ ಸಮಸ್ಯೆಯನ್ನು ಆಲಿಸಲಿಲ್ಲ, ಯುವಕರಿಗೆ ಅವಕಾಶ ನೀಡದ ಬಿಜೆಪಿಗೆ ಯುವಜನತೆಯು ಇಂದು ಕಾಂಗ್ರೇಸ್ಸಿನ ಯುವ ಅಭ್ಯರ್ಥಿಗಳನ್ನು ಬೆಂಬಲಿಸಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಿದ್ದಾರೆ ಎಂದರು.
ಅಭ್ಯರ್ಥಿ ರಮೇಶ್ ಜೋಗಪ್ಪ ಮಾತನಾಡಿ ಶಿಕ್ಷಕರ ವೇತನ ತಾರತಮ್ಯ, ಮೌಲ್ಯ ಮಾಪನಕ್ಕೆ ಸೂಕ್ತ ಸ್ಥಾನಮಾನವಿಲ್ಲ, ಕನ್ನಡ ಶಾಲೆಯ ಮುಚ್ಚುಗಡೆ, ಪಠ್ಯದಲ್ಲಿ ಕೇಸರೀಕರಣ, ಹೊಸ ನೇಮಕಾತಿ ಇಲ್ಲದೇ ಹೈಕೋರ್ಟ್ ಛೀಮಾರಿ, ಕೇಂದ್ರದ ಅಕ್ಷರ ದಾಸೋಹ ಮತ್ತು ಸರ್ವಶಿಕ್ಷಣ ಅಭಿಯಾನದ ಯೋಜನೆ ತಮ್ಮದೆಂದು ಹೇಳುವ ಬಿಜೆಪಿಯ ಸಾಧನೆ ಶೂನ್ಯವಾಗಿದ್ದು ಬದಲಾವಣೆಯನ್ನು ತರಲು ಕಾಂಗ್ರೇಸನ್ನು ಬೆಂಬಲಿಸಿ ಎಂದರು.
ವಸಂತ ಬೆರ್ನಾರ್ಡ್, ಹಳೆಯಂಗಡಿ, ಗುಣಪಾಲ ಶೆಟ್ಟಿ ತೋಕೂರು, ಎಂ.ಬಿ.ನೂರು ಮಹಮ್ಮದ್, ಸರೋಜಿನಿ ಸುವರ್ಣ, ಧನಂಜಯ ಕೋಟ್ಯಾನ್ ಮಟ್ಟು, ಪುತ್ತುಬಾವ ಕಾರ್ನಾಡು, ಬಿ.ಎಂ.ಆಸಿಫ್, ಪ್ರಮೋದ್‌ಕುಮಾರ್, ಪದ್ಮನಾಭ ನರಿಂಗಾನ, ಫಾರೂಕ್ ಉಲ್ಲಾಳ, ಶಾಲೆಟ್ ಪಿಂಟೋ, ವಿನ್ಸಂಟ್ ಬಳ್ಕುಂಜೆ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಶೈಕ್ಷಣಿಕ ಅಗತ್ಯಗಳಿಗೆ ಒಲವು : ಡಿ.ಎಚ್. ಶಂಕರ ಮೂರ್ತಿ

ಕಿನ್ನಿಗೋಳಿ: ಗ್ರಾಮೀಣ ಜನರ ಶೈಕ್ಷಣಿಕ ಅಗತ್ಯಗಳಿಗೆ ಒತ್ತುಕೊಟ್ಟು 184 ಹೊಸ ಸರಕಾರಿ ಪದವಿ ಕಾಲೇಜು ಕಳೆದ 20 ತಿಂಗಳ ಬಿಜೆಪಿ ಅಧಿಕಾರ ಅವಧಿಯಲ್ಲಿ ಪ್ರಾರಂಭಗೊಂಡಿದೆ. ಜನಪರ ಯೋಜನೆಗಳನ್ನು...

Close