ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Photo By Narendra Kerekadu

ಮುಲ್ಕಿ : ವಿದ್ಯಾದಾನವು ಅತ್ಯುತ್ತಮ ದಾನವಾಗಿದ್ದು ಶೈಕ್ಷಣಿಕ ಸಹಕಾರ ನೀಡುವುದು ಉತ್ತಮ ಕಾರ್ಯವಾಗಿದೆ ಎಂದು ಅಂತರಾಷ್ಟ್ರೀಯ ದೇಹಧಾಢ್ಯ ಪಟು ನಾಗೇಶ್ ಪ್ರಸಾದ್ ಹೇಳಿದರು.
ಅವರು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾದಾನಕ್ಕೆ ಸಹಕಾರಿಯಾಗುವ ಜೊತೆಯಲ್ಲಿ ಆರೋಗ್ಯ ರಕ್ಷಣೆಗಾಗಿ ಕ್ರೀಡಾ ತರಬೇತಿ ಮತ್ತು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಬ್ಯಾಸದ ಶೈಕ್ಷಣಿಕ ಮಾಹಿತಿ ನೀಡುವ ಕೆಲಸವಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ ವಹಿಸಿದ್ದರು.
ಈ ಸಂದರ್ಭ ಅತಿಥಿಗಳಾಗಿ ಮುಲ್ಕಿ ಶ್ರೀ ಗೋಕರ್ಣನಾಥ ಬ್ಯಾಂಕ್ ಪ್ರಭಂದಕರಾದ ವಿನಯಾ ಎಂ.ಕೋಟ್ಯಾನ್, ಮುಲ್ಕಿ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಚಾಲಕರಾದ ಎಚ್.ವಿ.ಕೋಟ್ಯಾನ್, ರತ್ನಾಕರ ಸಾಲ್ಯಾನ್, ಸಂಘದ ಕೋಶಾಧಿಕಾರಿ ರಮೇಶ್ ಕೊಕ್ಕರಕಲ್, ಸದಾನಂದ ಅಂಚನ್, ಕರಿಯ ಪೂಜಾರಿ, ಸರೋಜಿನಿ ಸುವರ್ಣ, ಯದೀಶ್ ಅಮೀನ್ ಕೊಕ್ಕರಕಲ್ ಮತ್ತಿತರರು ವೇದಿಕೆಯಲ್ಲಿದ್ದರು.
ಸಂಘದ ಗೌ. ಕಾರ್ಯದರ್ಶಿ ಗೋಪೀನಾಥ ಪಡಂಗ ಸ್ವಾಗತಿಸಿದರು. ಉದಯ ಅಮೀನ್ ಮಟ್ಟು ನಿರೂಪಿಸಿದರು. ವಾಮನಕೋಟ್ಯಾನ್ ನಡಿಕುದ್ರು ವಂದಿಸಿದರು

Comments

comments

Leave a Reply

Read previous post:
ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ; ಐವನ್ ಡಿಸೋಜಾ

Narendra Kerekadu ಮುಲ್ಕಿ : ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಬಿಜೆಪಿ ಸೋಲಿನ ಭೀತಿಯಲ್ಲಿ ಇರುವುದರಿಂದ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಮುಖ್ಯ ಮಂತ್ರಿಯವರೆಗೆ ಇರುವವರು ಮತಯಾಚನೆ ಮಾಡುತ್ತಿರುವುದೇ ಪ್ರತ್ಯಕ್ಷ...

Close