ಶೈಕ್ಷಣಿಕ ಅಗತ್ಯಗಳಿಗೆ ಒಲವು : ಡಿ.ಎಚ್. ಶಂಕರ ಮೂರ್ತಿ

ಕಿನ್ನಿಗೋಳಿ: ಗ್ರಾಮೀಣ ಜನರ ಶೈಕ್ಷಣಿಕ ಅಗತ್ಯಗಳಿಗೆ ಒತ್ತುಕೊಟ್ಟು 184 ಹೊಸ ಸರಕಾರಿ ಪದವಿ ಕಾಲೇಜು ಕಳೆದ 20 ತಿಂಗಳ ಬಿಜೆಪಿ ಅಧಿಕಾರ ಅವಧಿಯಲ್ಲಿ ಪ್ರಾರಂಭಗೊಂಡಿದೆ. ಜನಪರ ಯೋಜನೆಗಳನ್ನು ಸಾಕಾರಗೊಳಿಸುವ ಕಾರ್ಯಕ್ರಮಗಳು ಅಭಿವೃದ್ಧಿಯಲ್ಲಿದೆ ಎಂದು ಡಿ. ಎಚ್. ಶಂಕರ ಮೂರ್ತಿ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ವಿಧಾನ ಪರಿಷತ್ ಚುನಾವಣೆಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನೈರುತ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡುತ್ತಾ ಬಿಜೆಪಿ ಅಧಿಕಾರಾವಧಿಯಲ್ಲಿ 3,650ಕೋಟಿ ಶಿಕ್ಷಣಕ್ಕಾಗಿಟ್ಟ ಅನುದಾನವನ್ನು 2012-13 ರ ಸಾಲಿನಲ್ಲಿ 15,071 ಕೋಟಿ ಹೆಚ್ಚಿಸಿದೆ, ಮೊರಾರ್ಜಿ ವಸತಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರನ್ನು ಕಾಯಂಗೊಳಿಸುವ ಕೆಲಸ ನಡೆಯುತ್ತಿದೆ. ಮೂಲ್ಕಿ, ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಜಗದೀಶ ಅಧಿಕಾರಿ, ಬಾಹುಬಲಿ ಪ್ರಸಾದ್, ಆದರ್ಶ ಶೆಟ್ಟಿ ಎಕ್ಕಾರು, ಜಿ.ಪಂ.ಸದಸ್ಯ ಈಶ್ವರ ಕಟೀಲು, ಕಿನ್ನಿಗೋಳಿ ಪಂ. ಅಧ್ಯಕ್ಷ ದೇವಪ್ರಸಾದ್ ಪುನರೂರು, ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ರೋಟರಾಕ್ಟ್ ಜಿಲ್ಲಾ ಅಧಿವೇಶನದಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಗೆ 14 ಪ್ರಶಸ್ತಿಗಳು

ಕಿನ್ನಿಗೋಳಿ : ಮೂಡಬಿದ್ರೆಯಲ್ಲಿ ಜರಗಿದ ರೋಟರಿ ಜಿಲ್ಲೆ 3180 ರ ರೋಟರಾಕ್ಟ್ ಜಿಲ್ಲಾ ಅಧಿವೇಶನದಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಗೆ 14ಪ್ರಶಸ್ತಿಗಳು ದೊರಕಿತು. ಗಣೇಶ್ ಕಾಮತ್ - ಉತ್ತಮ...

Close