ಕಾಂಗ್ರೇಸ್‌ಗೆ ಸೋಲಿನ ಸರಮಾಲೆ – ನಾಗರಾಜ ಶೆಟ್ಟಿ

Photo By Naredra Kerekadu

ಮುಲ್ಕಿ : ಶಿಕ್ಷಕರ ಮತ್ತು ಪದವಿ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲ್ಲುತ್ತದೆ ಎಂಬ ಭ್ರಮೆಯೊಂದಿಗೆ ಬಿಜೆಪಿಯ ಬಗ್ಗೆ ಎಷ್ಟೇ ಅಪಪ್ರಚಾರ ನಡೆಸಿದರು ಅದಕ್ಕೆ ಸೋಲಿನ ಸರಮಾಲೆ ಮುಂದುವರಿಯುತ್ತದೆ, ಕರಾವಳಿ ಭಾಗದಲ್ಲಿ ಬಿಜೆಪಿಯ ಕಾರ್ಣಿಕ್ ಮತ್ತು ಶಂಕರ ಮೂರ್ತಿ ಸ್ಪಷ್ಟವಾದ ಮುನ್ನಡೆಯನ್ನು ಸಾಧಿಸುತ್ತಾರೆ ಅಲ್ಲದೇ ಶಿಕ್ಷಣಕ್ಕಾಗಿ ಸರ್ಕಾರವು ನೀಡಿದ ಯೋಜನೆಗಳೇ ನಮಗೆ ಶ್ರೀರಕ್ಷೆ ಎಂದು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು.

ಮುಲ್ಕಿಯ ಕಾರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬುಧವಾರ ಭೇಟಿ ನೀಡಿ ಬಿಜೆಪಿ ಪರ ಮತ ಯಾಚಿಸಿದರು. ತನ್ನ ರಾಜಕೀಯ ಜೀವನ ಬಿಜೆಪಿಯಲ್ಲಿಯೇ ಆರಂಭವಾಗಿದ್ದು ಅಲ್ಲದೇ ಬಿಜೆಪಿಯ ನಿಷ್ಠಾವಂತ ಕಾರ್ಯರ್ತನಾಗಿಯೇ ಇರುತ್ತೇನೆಯೇ ಹೊರತು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೇಯೇ ಇಲ್ಲ ಎಂದು ನಾಗರಾಜ ಶೆಟ್ಟಿಯವರು ಜೆಡಿಎಸ್‌ಗೆ ಪಕ್ಷಾಂತರ ಮಾಡುತ್ತಾರೆ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದರು.
ದ.ಕ.ಜಿ.ಪಂ.ಸದಸ್ಯ ಈಶ್ವರ ಕಟೀಲು, ಜಿಲ್ಲಾ ಉಪಾಧ್ಯಕ್ಷ ಭುವನಾಭಿರಾಮ ಉಡುಪ, ಕ್ಷೇತ್ರದ ಅಧ್ಯಕ್ಷೆ ಕಸ್ತೂರಿ ಪಂಜ, ಶೈಲೇಶ್,  ಉಮೇಶ್ ಮಾನಂಪಾಡಿ ಮುಲ್ಕಿ ನಗರ ಪಂಚಾಯಿತಿ ಸದಸ್ಯ ವಿಠಲ ಇನ್ನಿತರರು ಹಾಜರಿದ್ದರು.
ಕಟೀಲು ದೇವಳದ ಶಿಕ್ಷಣ ಸಂಸ್ಥೆ, ಕಿನ್ನಿಗೋಳಿ ಶಾಲೆ, ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ, ಮುಲ್ಕಿ ವಿಜಯಾ ಕಾಲೇಜು, ನಾರಾಯಣಗುರು ಪದವಿ ಪೂರ್ವ ಕಾಲೇಜುಗಳಿಗೂ ಭೇಟಿ ನೀಡಿದರು.

Comments

comments

Leave a Reply

Read previous post:
ಶ್ರೀ ಶಾರದಾ ಪ್ರೌಢ ಶಾಲೆಯ ವಿದ್ಯಾರ್ಥಿ ಅಭೀಷೇಕ್ ಆಳ್ವ ಪ್ರಥಮ

 ಕಿನ್ನಿಗೋಳಿ : 2012  ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶಿಮಂತೂರು ಅನುದಾನಿತ ಶ್ರೀ ಶಾರದಾ ಪ್ರೌಢ ಶಾಲೆಯ ವಿದ್ಯಾರ್ಥಿ ಅಭೀಷೇಕ್ ಆಳ್ವ 593(94.89%) ಅಂಕಗಳನ್ನು...

Close