ಮುಲ್ಕಿ ಫೋಲೀಸರಿಂದ ಕದ್ದ ಬಂಗಾರ ವಾರೀಸುದಾರರಿಗೆ ಹಸ್ತಾಂತರ

Photo & News by Prakash M Suvarna & Narendra Kerekadu

ಮುಲ್ಕಿ : ಮುಲ್ಕಿಯ ಕುಖ್ಯಾತ ಕಳ್ಳನಾಗಿ ಗುರುತಿಸಿಕೊಂಡ ಬೆಳ್ಳಾಯರು ನಿವಾಸಿ ಅಬ್ದುಲ್ ರಜಾಕ್‌ನಿಂದ ವಶಪಡಿಸಿಕೊಂಡ ಚಿನ್ನದ ಆಭರಣಗಳಲ್ಲಿ ಒಂದು ಪ್ರಕರಣದಲ್ಲಿನ ಸಂಭಂದಿಸಿದಂತೆ ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮುಲ್ಕಿ ವೃತ್ತ ನಿರೀಕ್ಷಕ ಬಶೀರ್ ಆಹ್ಮದ್ ವಾರಸುದಾರರಿಗೆ ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಿದರು.

ಪ್ರಸ್ತುತ ಕೊಲೆ ಹಾಗೂ ಕಳ್ಳತನದ ಆರೋಪದಲ್ಲಿ ಬಂದಿಯಾಗಿರುವ ಅಬ್ದುಲ್ ರಜಾಕ್‌ನನ್ನು ಮುಲ್ಕಿ ವೃತ್ತ ನಿರೀಕ್ಷಕ ಬಶೀರ್ ಅಹ್ಮದ್‌ರವರ ನೇತೃತ್ವದಲ್ಲಿ ಮುಲ್ಕಿ ಪೊಲೀಸರು ಆತನ ಮಾಡಿದ ಕೃತ್ಯಗಳನ್ನು ಬಯಲಿಗೆಳೆದಿದ್ದು ಸುಮಾರು ಆರು ಕಡೆಗಳಲ್ಲಿ ಕಳ್ಳತನ ನಡೆಸಿದ್ದನಲ್ಲದೇ ಕೊಳಚಿಕಂಬಳದಲ್ಲಿನ ವೃದ್ದೆಯೊಬ್ಬರನ್ನು ಕೊಂದು ಆಕೆಯ ಮೈಮೇಲಿದ್ದ ಚಿನ್ನವನ್ನು ಅಪಹರಿಸಿದ್ದನು ಎಂದು ಆರೋಪಿಸಲಾಗಿದೆ.

ಕಿನ್ನಿಗೋಳಿ ದಾಮಸ್ ಕಟ್ಟೆಯ ನಿವಾಸಿ  ಅಲಿಸಾ ನಜರತ್ (76) ಎಂಬುವವರ ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳೆದ ವರ್ಷ ಡಿಸೆಂಬರ್ ತಿಂಗಳ 23ರಂದು ಕಳ್ಳತನ ಮಾಡಿದ್ದು ಈಗ ನ್ಯಾಯಾಲಯದ ಆದೇಶದಂತೆ ವೃತ್ತ ನಿರೀಕ್ಷಕರು ಚಿನ್ನಾಭರವಣವನ್ನು ಹಸ್ತಾಂತರಿಸಿದ್ದಾರೆ. 38 ಗ್ರಾಂನ ಚೈನು, 36 ಗ್ರಾಂನ ಹವಳದ ಚೈನು, 8ಗ್ರಾಂನ ಎರಡು ಬೆಂಡೊಲೆ, 15ಗ್ರಾಂನ ಎರಡು ಬಳೆಗಳು ಒಟ್ಟು 98 ಗ್ರಾಂನ ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಶುಕ್ರವಾರ ಹಸ್ತಾಂತರಿಸಿದರು.
ಮುಂದಿನ ದಿನದಲ್ಲಿ ಇನ್ನೂ ಹಲವು ಪ್ರಕರಣದಲ್ಲಿನ ಕೃತ್ಯದ ಬಗ್ಗೆ ತನಿಖೆ ಮುಂದುವರಿದಿದ್ದು, ಜೂನ್ 12ರವರೆಗೆ ನ್ಯಾಯಾಂಗ ಬಂಧನವನ್ನು ಆರೋಪಿಗೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಮುಲ್ಕಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಹಾಗೂ ಮಂಗಳೂರು ಕಮಿಷನರ್‌ರ ಶ್ಲಾಘನೆ ವ್ಯಕ್ತವಾಗಿದೆ.

 

 

Comments

comments

Leave a Reply

Read previous post:
ಮುಲ್ಕಿಯಲ್ಲಿ ಭಾರತಮಾತಾ ಪೂಜನ

Photo By Prakash M Suvarna ಮುಲ್ಕಿ: ಇಲ್ಲಿನ ಕೆ.ಎಸ್.ರಾವ್ ನಗರದ ಭಾರತ ಮಾತಾ ಪೂಜನ ನಡೆಯಿತು. ಇದೇ ಸಂದರ್ಭ ಪರಿಸರದ 125 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು....

Close