ನಿಡ್ಡೋಡಿಯಲ್ಲಿ ಗಿಡ ನೆಡುವಿಕೆ

Photo By: Mithuna Kodethoor

ಕಿನ್ನಿಗೋಳಿ: ಮೂಡುಬಿದ್ರೆ ರೇಂಜ್‌ನ  306 ಹೆಕ್ಟೇರ್ ಪ್ರದೇಶದಲ್ಲಿ 2,22,975 ಗಿಡಗಳನ್ನು ನೆಡಲಾಗುವುದು ಎಂದು ಮೂಡುಬಿದ್ರೆ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ತಿಳಿಸಿದರು. ಅವರು ಸೋಮವಾರ ನಿಡ್ಡೋಡಿಯಲ್ಲಿ ಕಿನ್ನಿಗೋಳಿ ವ್ಯಾಪ್ತಿಯ ಐದು ಕಿಲೋಮೀಟರ್ ದೂರದ ರಸ್ತೆ ಬದಿಯಲ್ಲಿ ಎರಡು ಸಾವಿರ ಗಿಡಗಳನ್ನು ನೆಡುವ ಕರ್ಯಾಕ್ರಮ  ಉದ್ಘಾಟಿಸಿ ಮಾತನಾಡಿದರು.

ಮೂಡುಬಿದ್ರೆ ಪರಿಸರದ ರಸ್ತೆ ಬದಿ ಒಂದು ಸಾವಿರ ಗಿಡಗಳನ್ನು ನೆಡಲಾಗುವುದು. ಅಲ್ಲದೆ ಸಾರ್ವಜನಿಕರಿಗೆ ವಿತರಿಸಲು 10 ಸಾವಿರ ಗಿಡಗಳು ಸಿದ್ಧವಿದ್ದು, ಅದರ ಮೌಲ್ಯ ನೀಡಬೇಕಾಗುತ್ತದೆ. ಹಲಸು, ಮಾವು, ರೆಂಜ, ತೇಗ ಮುಂತಾದ ಗಿಡಗಳನ್ನು ನೆಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕಲ್ಲಮುಂಡ್ಕೂರು ಗ್ರಾ.ಪಂ.ಅಧ್ಯಕ್ಷೆ ಗೀತಾ ಅಮೀನ್, ಅರಣ್ಯ ಇಲಾಖೆಯ ಯೋಗೀಶ್ವರ್, ನರಸಿಂಹ ಪ್ರಭು, ರೋಲ್ಫಿ ಡಿಕೋಸ್ತ, ಸಿಪ್ರಿಯನ್ ಡಿ’ಸೋಜ, ಜೆರಾಂ ಮೋರಸ್, ದುರ್ಗಾಪ್ರಸಾದ್ ಹೆಗ್ಡೆ ಮತ್ತಿತರರಿದ್ದರು.

Comments

comments

Leave a Reply

Read previous post:
ಮುಲ್ಕಿ; ಮತದಾನಕ್ಕೆ ಹಲವು ಗೊಂದಲ

Narenra Kerekadu ಮುಲ್ಕ್ಕಿ: ಒಟ್ಟು ಎಂಟು ಗ್ರಾಮ ಪಂಚಾಯತ್ ಮತ್ತು ಒಂದು ನಗರ ಪಂಚಾಯತ್ ವ್ಯಾಪ್ತಿಯಲ್ಲಿನ ಮುಲ್ಕಿ ಹೋಬಳಿಯಲ್ಲಿ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವಿ...

Close