ಮುಲ್ಕಿ; ಮತದಾನಕ್ಕೆ ಹಲವು ಗೊಂದಲ

Narenra Kerekadu

ಮುಲ್ಕ್ಕಿ: ಒಟ್ಟು ಎಂಟು ಗ್ರಾಮ ಪಂಚಾಯತ್ ಮತ್ತು ಒಂದು ನಗರ ಪಂಚಾಯತ್ ವ್ಯಾಪ್ತಿಯಲ್ಲಿನ ಮುಲ್ಕಿ ಹೋಬಳಿಯಲ್ಲಿ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವಿ ಕ್ಷೇತ್ರಕ್ಕಾಗಿ ನಡೆದ ಮತದಾನದಲ್ಲಿ ನಿನ್ನೆ ನೀರಸ ಪ್ರತಿಕ್ರಿಯೆ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮುಲ್ಕಿ ನಗರ ಪಂಚಾಯತ್‌ನ ಮತಗಟ್ಟೆಯಲ್ಲಿ ಶಿಕ್ಷಕರು ಮತ್ತು ಪದವೀಧರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶಿಕ್ಷಕರ ಕ್ಷೇತ್ರದ ಒಟ್ಟು 144 ಮತಗಳಲ್ಲಿ 104 ಮತಗಳು ಚಲಾವಣೆಗೊಂಡಿದ್ದು ಶೇ.72.25 ದಾಖಲಾಗಿದೆ. ಪದವಿ ಕ್ಷೇತ್ರದ ಒಟ್ಟು 380ಮತಗಳಲ್ಲಿ 197ಮತಗಳು ಚಲಾವಣೆಗೊಂಡು ಶೇ.51.48 ದಾಖಲಾಗಿದೆ.
ಕಾಂಗ್ರೇಸ್ ಮತ್ತು ಬಿಜೆಪಿ ಬೂತ್‌ಗಳನ್ನು ನಿರ್ಮಿಸಿ ಮತದಾರರನ್ನು ಸೆಳೆಯುತ್ತಿದ್ದರೆ, ಜೆಡಿಎಸ್ ಮತ್ತಿತರ ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಯಾರು ಪ್ರಚಾರ ಮಾಡುತ್ತಿರಲಿಲ್ಲ, ಕೆಲವು ಶಿಕ್ಷಕರಿಗೆ ಶಿಕ್ಷಕರ ಮತದಾನಕ್ಕೆ ಮಾತ್ರ ಅವಕಾಶ ಇದ್ದು ಅವರ ಪದವಿ ಮತದಾನದ ಪಟ್ಟಿಯಲ್ಲಿ ಹೆಸರಿಲ್ಲದೇ ಗೊಂದಲಕ್ಕೆ ಕಾರಣವಾಯಿತಲ್ಲದೇ ಕೆಲವೊಂದು ಶಿಕ್ಷಕರು ಕೇವಲ ಪದವಿ ಮತಗಳನ್ನು ಮಾತ್ರ ಚಲಾವಣೆ ಮಾಡಿದರೆ ಅವರಿಗೆ ಶಿಕ್ಷಕರ ಕ್ಷೇತ್ರದಲ್ಲಿ ಮತದಾನಕ್ಕೆ ಅವಕಾಶವಿರಲಿಲ್ಲ ಈ ಗೊಂದಲಕ್ಕೆ ಅಧಿಕಾರಿಯವರಲ್ಲಿಯೂ ಉತ್ತರ ಇರಲಿಲ್ಲ.
ಈ ನಡುವೆ ಕೆಲವು ಮತದಾರರಿಗೆ ಪದವಿಯ ಮತ ಮುಲ್ಕ್ಕಿಯಲ್ಲಿದ್ದರೆ, ಶಿಕ್ಷಕರ ಕ್ಷೇತ್ರದ ಮತವು ದೂರದ ಸುರತ್ಕಲ್ ಮತ್ತು ಪಡುಬಿದ್ರಿಯಲ್ಲಿದ್ದುದು ಸಹ ವಿಶೇಷವಾಗಿತ್ತು ಇದರ ಬಗ್ಗೆ ಪಕ್ಷದ ಕಾರ್ಯಕರ್ತರ ಬಳಿಯಲ್ಲಿಯೂ ಮಾಹಿತಿ ಸ್ಪಷ್ಟವಾಗಿ ಇರಲಿಲ್ಲ ಎಂದು ಶಿಕ್ಷಕಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಬಿಗಿ ಬಂದೋ ಬಸ್ತು ಮತ್ತು ಮತದಾನದ ಸಂಪೂರ್ಣ ವಿಡಿಯೋ ಚಿತ್ರೀಕರಣ ನಡೆಸಿದ್ದು ವಿಶೇಷವಾಗಿತ್ತು. ಒಟ್ಟಾರೆಯಾಗಿ ಅಧಿಕಾರಿಯವರಲ್ಲಿ ಇದ್ದ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಅವರಿಗೆ ಮತದಾನ ಅವಕಾಶವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು, ಕೆಲವು ಪಕ್ಷದ ಕಾರ್ಯಕರ್ತರು ಪದವಿ ಪಡೆದಿದ್ದರು ತಮಗೆ ಅವಕಾಶ ಹೇಗೆ ಎಂದು ಮಾಧ್ಯಮದವರನ್ನು ಕೇಳುತ್ತಿದ್ದರಲ್ಲದೇ ಮುಂದಿನ ಚುನಾವಣೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಪಕ್ಷ ಪ್ರಮುಖರಲ್ಲಿ ಭಿನ್ನವಿಸಿಕೊಳ್ಳುತ್ತಿದ್ದರು.

Comments

comments

Leave a Reply

Read previous post:
ಕೊಡೆತ್ತೂರು

Mithuna Kodethoor ಹತ್ತೂರು ಸೇರಿ ಅತ್ತೂರು ಆಯಿತು. ಅತ್ತೂರ‍್ದ ಕುತ್ತಿ ಕುತ್ತೆತ್ತೂರು ಆಯಿತು. ಅತ್ತೂರ‍್ದ ಕೊಡಿ ಕೊಡೆತ್ತೂರು ಆಯಿತು ಅಂತ ಹಿರಿಯರು ಅಭಿಪ್ರಾಯ ಪಡುತ್ತಾರೆ. ದೇವಸ್ವ ಶಬ್ದ...

Close