ಕಿನ್ನಿಗೋಳಿ ಸೈಂಟ್ ಮೆರೀಸ್ ಶಾಲೆ-ಸಮವಸ್ತ್ರ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ, ಸನ್ಮಾನ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆತಾಗ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳನ್ನು ಮೀರಿ ನಿಲ್ಲಲು ಸಾಧ್ಯವೆಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ| ಫಾ| ಆಲ್ಪ್ರೆಡ್ ಪಿಂಟೊ ಹೇಳಿದರು.
ಅವರು ಮಂಗಳವಾರ ಸೈಂಟ್ ಮೆರೀಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ ವಿತರಣೆ ಮತ್ತು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಟಿ ವೈದ್ಯ ಲಿಯೋ ಮಿನೇಜಸ್ ಸ್ಮಾರಕ ದತ್ತಿ ನಿಧಿಯ ಸಮವಸ್ತ್ರ ವಿತರಣೆ, ಕಿನ್ನಿಗೋಳಿ ಪರಿಸರದಲ್ಲಿಯೇ ಎಸ್.ಎಸ್.ಎಲ್.ಸಿ ಯ ಗರಿಷ್ಠ ಅಂಕ ಪಡೆದ ಶಾಲೆಯ ಹಳೇ ವಿದ್ಯಾರ್ಥಿ ಅನಂತ ಉಡುಪರ ಸನ್ಮಾನ ನಡೆಯಿತು.
ಸಹಾಯಕ ಚರ್ಚ್ ಧರ್ಮಗುರು ರೆ| ಫಾ| ವಿನೋದ್ ಲೋಬೊ ಯುಗಪುರುಷದ ಭುವನಾಭಿರಾಮ ಉಡುಪ, ಜೆರಾಲ್ಡ್ ಮಿನೇಜಸ್, ರೋನಿ ಡಿ’ಸೋಜ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಆನೆಟ್ ಲೋಬೋ ಸ್ವಾಗತಿಸಿ ಜೆಸಿಂತಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು

 

Comments

comments

Leave a Reply

Read previous post:
ನಿಡ್ಡೋಡಿಯಲ್ಲಿ ಗಿಡ ನೆಡುವಿಕೆ

Photo By: Mithuna Kodethoor ಕಿನ್ನಿಗೋಳಿ: ಮೂಡುಬಿದ್ರೆ ರೇಂಜ್‌ನ  306 ಹೆಕ್ಟೇರ್ ಪ್ರದೇಶದಲ್ಲಿ 2,22,975 ಗಿಡಗಳನ್ನು ನೆಡಲಾಗುವುದು ಎಂದು ಮೂಡುಬಿದ್ರೆ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ತಿಳಿಸಿದರು. ಅವರು...

Close