ದಾಮಸ್ಕಟ್ಟೆಯಲ್ಲಿ ನೀರಿನಿಂದಾಗಿ ರಸ್ತೆ ತಡೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಮಸ್ ಕಟ್ಟೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಚರಂಡಿಯ ಅವ್ಯವಸ್ಥೆಯಿಂದಾಗಿ ರಸ್ತೆಗೆ ನೀರು ನುಗ್ಗಿ ವಾಹನ ಸಂಚಾರ ಹಾಗೂ ಪಾದಾಚಾರಿಗಳಿಗೆ ತೊಂದರೆಯುಂಟಾಗಿದೆ. ಕಳೆದ ವರ್ಷವೂ ಇದೇ ರೀತಿಯ ತೊಂದರೆವುಂಟಾದಾಗ ಪಂಚಾಯತ್ ಆಡಳಿತ ಚರಂಡಿ ದುರಸ್ಥಿ ಕಾಮಗಾರಿ ನಡೆಸಿತ್ತು. ಆದರೆ ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸಿದೆ. ಈ ಬಾರಿಯ ಮೊದಲ ಮಳೆಗೆ ರಸ್ತೆ ತುಂಬಾ ನೀರು ತುಂಬಿದ್ದು ರಸ್ತೆ ಬದಿಯ ಖಾಸಗಿಯವರ ಅಸಹಕಾರದಿಂದಾಗಿ ಈ ಪರಸ್ಥಿತಿ ಉಂಟಾಗಿದೆ. ಶಾಲಾ ಮಕ್ಕಳಿಗೆ, ವಾಹನ ಚಾಲಕರಿಗೆ ತೊಂದರೆಯಾಗಿದ್ದು ಐಕಳ ಪಂಚಾಯತ್ ಹಾಗೂ ಸಂಬಂದಪಟ್ಟ ಇಲಾಖೆಯವರು ಸ್ಪಂದಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Comments

comments

Leave a Reply

Read previous post:
ಕಿನ್ನಿಗೋಳಿ ಸೈಂಟ್ ಮೆರೀಸ್ ಶಾಲೆ-ಸಮವಸ್ತ್ರ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ, ಸನ್ಮಾನ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆತಾಗ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳನ್ನು ಮೀರಿ ನಿಲ್ಲಲು ಸಾಧ್ಯವೆಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ| ಫಾ| ಆಲ್ಪ್ರೆಡ್...

Close