ಸಂಕಲಕರಿಯ ಹಾಲು ಉತ್ಪಾದಕರ ಸಂಘದಲ್ಲಿ ಸನ್ಮಾನ

Photo  by Sharath Shetty
ಕಿನ್ನಿಗೋಳಿ : ಸಂಕಲಕರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಶನಿವಾರ ಸಂಕಲಕರಿಯ ಶಾಲೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶರತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂಘಕ್ಕೆ ಅಧಿಕಹಾಲು ನೀಡುತ್ತಿರುವ ಪೊಸ್ರಾಲು ಶೇಖರರನ್ನು ಸನ್ಮಾನಿಸಲಾಯಿತು. ಒಕ್ಕಾಟದಿಂದ ನೀಡಲಾದ ಹಾಲಿನ ಪಾತ್ರೆ ನೀಡಿಕೆ, ಜನಶ್ರೀ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಸಂಘದ ನಿವ್ವಳ ಲಾಭ ವಿಂಗಡಣೆ ನಡೆಯಿತು. ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತ, ಸಂಘದ ಸ್ಥಪಕಾಧ್ಯಕ್ಷ ಭಾಸ್ಕರ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಕರುಣಾಕರ ಶೆಟ್ಟಿ, ನಿರ್ದೇಶಕರಾದ ಭಾಸ್ಕರ, ಎಸ್. ಶೆಟ್ಟಿ, ಸುಧಾಕರ ಸಾಲ್ಯಾನ್, ಪ್ರಶಾಂತ್ ಶೆಟ್ಟಿ, ಮೇರಿ ಸೆರಾವೋ, ಕರುಣಾಕರ ಶೆಟ್ಟಿ, ನಂದೀಶ ಆಂಚನ್, ಶಾರದಾ, ಲೆಕ್ಕ ಪರಿಶೋಧಕ ಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು. ಕಾರ್ಯದರ್ಶಿ ಸುರೇಶ್ ವಂದಿಸಿದರು.

Comments

comments

Leave a Reply

Read previous post:
ದಾಮಸ್ಕಟ್ಟೆಯಲ್ಲಿ ನೀರಿನಿಂದಾಗಿ ರಸ್ತೆ ತಡೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಮಸ್ ಕಟ್ಟೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಚರಂಡಿಯ ಅವ್ಯವಸ್ಥೆಯಿಂದಾಗಿ ರಸ್ತೆಗೆ ನೀರು ನುಗ್ಗಿ ವಾಹನ ಸಂಚಾರ ಹಾಗೂ ಪಾದಾಚಾರಿಗಳಿಗೆ...

Close