ತೋಕೂರು,ದಂತ ಚಿಕಿತ್ಸಾ ತಪಾಸಣಾ ಶಿಬಿರ ಮತ್ತು ಮಾಹಿತಿ ಕಾರ್ಯಕ್ರಮ

Photo By: PVRAO

ತೋಕೂರು: ತಪೋವನ, ತೋಕೂರು, “ಆರೋಗ್ಯವಂತರಾಗಿ , ದೇಶದ ಯುವ ಶಕ್ತಿಯಾಗಿ ಬೆಳೆಯಿರಿ, ಆರೋಗ್ಯವಂತ ಯುವಶಕ್ತಿಯೇ ನಮ್ಮ ದೇಶದ ಶಕ್ತಿ, ಯುವಜನರು ದುಶ್ಚಟಗಳಿಗೆ ಬಲಿ ಬೀಳದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ದೇಶದ ಆಸ್ತಿಯಾಗಿ ಹಾಗೂ ಮಾಜಿ ರಾಷ್ಟ್ರಪತಿಯವರಾದ ಡಾ| ಜೆ. ಅಬ್ದುಲ್ ಕಲಾಂ ಕನಸನ್ನು ನನಸಾಗುವಲ್ಲಿ ಆಲೋಚಿಸಬೇಕು” ಎಂದು ಕರೆಯಿತ್ತ ಶ್ರೀ ವಿನೋದ್ ಎಸ್. ಸಾಲ್ಯಾನ್, ಅಧ್ಯಕ್ಷರು, ಪಡಪಣಂಬೂರು ಗ್ರಾಮ ಪಂಚಾಯತ್ , ಇವರು ಇಲ್ಲಿನ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ , ದೇರಳಕಟ್ಟೆ, , ರಾಷ್ಟ್ರೀಯ ಸೇವಾ ಘಟಕ, ಎಂ. ಆರ್.ಪೂಂಜಾ ಐ.ಟಿ.ಐ., ತಪೋವನ ಇವರ ಜಂಟೀ ಆಶ್ರಯದಲ್ಲಿ ದಂತ ಚಿಕಿತ್ಸಾ ಶಿಬಿರದ ಉದ್ಘಾಟನೆಯನ್ನು ಇವರು ನಡೆಸಿ ಕೊಟ್ಟರು.
ಡಾ| ಆಡ್ರಿ ಡಿಕ್ರೂಸ್, ಅಸಿಸ್ಟೆಂಟ್ ಪೋಫೆಸರ್, ಎ.ಬಿ. ಶೆಟ್ಟಿ ದಂತ ಮಹಾ ವಿದ್ಯಾಲಯ , ದೇರಳಕಟ್ಟೆ ಇವರು ಹಲ್ಲುಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿ, ಹಲ್ಲಿನ ತಪಾಸಣೆಯ ಬಳಿಕ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇರಳಕಟ್ಟೆ ಅಲ್ಲದೆ ಹೆಜಮಾಡಿ, ಮುಂಡ್ಕೂರು ಹಾಗೂ ತಾಳಿಪಾಡಿ ಕೇಂದ್ರಗಳಲ್ಲಿ ಸೂಕ್ತ ಉಚಿತ ದಂತ ಚಿಕಿತ್ಸೆಯ ವ್ಯವಸ್ಥೆಯಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ವಿನೋದ್ ಎಸ್. ಸಾಲ್ಯಾನ್, ಅಧ್ಯಕ್ಷರು, ಪಡಪಣಂಬೂರು ಗ್ರಾಮ ಪಂಚಾಯತ್ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ವೈ.ಎನ್. ಸಾಲಿಯಾನ್ ಇವರು ಯುವಜನತೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳುಮಾಡುತ್ತಿರುವುದು ವಿಷಾದನೀಯ ಎಂದರು.
ಸಂಸ್ಥೆಯ ವಿದ್ಯಾರ್ಥಿಯಾದ ಚಿ. ಚೇತನ್ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶ್ರೀ ಸುರೇಶ್ ಎಸ್. ಸ್ವಾಗತಿಸಿದರು, ಸಂಸ್ಥೆಯ ಹಿರಿಯ ತರಬೇತಿ ಅಧಿಕಾರಿಯಾಗಿರುವ ಶ್ರೀ ದಯಾನಂದ ಲಾಗ್ವಾಣ್‌ಕರ್ ಇವರು ಸಂದರ್ಭೋಚಿತವಾಗಿ ಮಾತಾನಾಡಿದರು. ಕಿರಿಯ ತರಬೇತಿ ಅಧಿಕಾರಿ ಶ್ರೀ ಹರಿ ಎಚ್. ಧನ್ಯವಾದವಿತ್ತರು. ಶ್ರೀ ವಿಶ್ವನಾಥ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಹಾಗೂ ಎ.ಬಿ. ಶೆಟ್ಟಿ ದಂತ ಮಹಾ ವಿದ್ಯಾಲಯ , ದೇರಳಕಟ್ಟೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಬಾಲಕಾರ್ಮಿಕ; ಇಂಟರಾಕ್ಟ್ ವಿದ್ಯಾರ್ಥಿಗಳ ಜಾಗೃತಿ

Photo By: Usha Narendra ಮುಲ್ಕಿ: ಕಾರ್ಖಾನೆಯಲ್ಲಿ ದುಡಿಯುವ ಮಕ್ಕಳ ಅಸಹಾಯಕತೆ, ಸಂಬ್ರಮಿಸುವ ವಯಸ್ಸಿನಲ್ಲಿ ದುಡಿಮೆ, ಕಾರ್ಮಿಕರಾಗಲು ಸಮಾಜದ ಒತ್ತಡಕ್ಕೆ ಸಮರ್ಥವಾಗಿ ಜಾಗೃತಿ ಮೂಡಿಸುವ ದೃಶ್ಯದ ಜೊತೆ ಜೊತೆಗೆ ಸುಂದರ...

Close