ಬಾಲಕಾರ್ಮಿಕ; ಇಂಟರಾಕ್ಟ್ ವಿದ್ಯಾರ್ಥಿಗಳ ಜಾಗೃತಿ

Photo By: Usha Narendra

ಮುಲ್ಕಿ: ಕಾರ್ಖಾನೆಯಲ್ಲಿ ದುಡಿಯುವ ಮಕ್ಕಳ ಅಸಹಾಯಕತೆ, ಸಂಬ್ರಮಿಸುವ ವಯಸ್ಸಿನಲ್ಲಿ ದುಡಿಮೆ, ಕಾರ್ಮಿಕರಾಗಲು ಸಮಾಜದ ಒತ್ತಡಕ್ಕೆ ಸಮರ್ಥವಾಗಿ ಜಾಗೃತಿ ಮೂಡಿಸುವ ದೃಶ್ಯದ ಜೊತೆ ಜೊತೆಗೆ ಸುಂದರ ಹಾಡುಗಳ ಸುಖ ದುಃಖದ ಕಂಪು ಇದೆಲ್ಲಾ ಮಕ್ಕಳಿಂದಲೇ ಪಸ್ತುತಿ ಇದು ಮುಲ್ಕಿ ಬಳಿಯ ನಿಟ್ಟೆ ವಿದ್ಯಾ ಸಂಸ್ಥೆಯ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ನಿಜಾರ್ಥವನ್ನು ಮಂಗಳವಾರ ಶಾಲೆಯ ವಿದ್ಯಾರ್ಥಿಗಳ ಸಮುದಾಯಕ್ಕೆ ಪ್ರದರ್ಶಿಸಿದರು.
ಶಾಲೆಯ ಇಂಟರಾಕ್ಟ್  ಕ್ಲಬ್‌ನ ಸಂಯೋಜನೆಯಲ್ಲಿ ಅದರ ಸದಸ್ಯರು ಆಗಿರುವ ವಿದ್ಯಾರ್ಥಿಗಳು ಇಂಟರ್ ನೆಟ್ ಮೂಲಕ ಮಾಹಿತಿಯನ್ನು ಸಂಗ್ರಹಿಸಿದ ಸಾಕ್ಷ ಚಿತ್ರದ ತುಣುಕುಗಳನ್ನು ಪ್ರದರ್ಶಿಸಿದರು ಅಲ್ಲದೇ ಅದರ ವಿಶ್ಲೇಷಣೆ ಮಾಡಿ ಮಕ್ಕಳನ್ನು ಕಾರ್ಮಿಕ ಪದ್ಧತಿಗೆ ದೂಡುತ್ತಿರುವ ಘಟನಾವಳಿಗಳು, ಮಾಲಿನ್ಯಕಾರಕ ಪಟಾಕಿ ಕಾರ್ಖಾನೆಯಲ್ಲಿ ದುಡಿಯುವ ಕೈಗಳು, ಬೆಂಕಿ ಪಟ್ಟಣ ತಯಾರಿಸುತ್ತಿರುವ ಮಕ್ಕಳಿಗೆ ಅಸುರಕ್ಷತೆಯ ವ್ಯವಸ್ಥೆ ಅದರಲ್ಲಿ ಸಂಭವಿಸುವ ದುರ್ಘಟನೆಗಳನ್ನು ಎಳೆ ಎಳೆಯಾಗಿ ಮಾಹಿತಿಯ ಮೂಲಕ ಬಿಡಿಸಿಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವಿದ್ಯಾರ್ಥಿಗಳಾದ ಕ್ಲಬ್‌ನ ಅಧ್ಯಕ್ಷೆ ಜೂಯಿಜೊಸ್ಸಿ ಪಿಂಟೋ ಮತ್ತು ಕಾರ್ಯದರ್ಶಿ ವಿದ್ಯಾಶ್ರೀ ಎಸ್.ಕೋಡಿಯವರು ಮಾತಿನ ಮೂಲಕ ಬಾಲ ಕಾರ್ಮಿಕ ಪದ್ದತಿಯನ್ನು ಅವಲೋಕಿಸಿ ಈ ಪಿಡುಗನ್ನು ನಿರ್ಮೂಲನೆ ಮಾಡಲು ಕೇವಲ ಸರ್ಕಾರಿ ವ್ಯವಸ್ಥೆಯಿಂದ ಸಾಧ್ಯವಿಲ್ಲ ಸ್ವಸ್ಥ್ಯ ಸಮಾಜದ ಚಿಂತನೆ ನಡೆಸುವ ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಬೇಕು, ಇದು ಸಜ್ಜನ ನಾಗರಿಕರ ಕರ್ತವ್ಯವೂ ಆಗಿದೆ ಎಂದು ಸಮರ್ಥಿಸಿಕೊಂಡರು, ಶಾಲಾ ವಿದ್ಯಾರ್ಥಿ ನಾಯಕ ಕ್ರಿಸ್ಟನ್ ತಾಂತ್ರಿಕವಾಗಿ ಸಹಕಾರವನ್ನು ನೀಡಿದರು.
ಮುಖ್ಯೋಪಾಧ್ಯಾಯಿನಿ ಶ್ರೀಲತಾ ರಾವ್, ಶಾಲಾ ಶಿಕ್ಷಕಿಯರು ವಿದ್ಯಾರ್ಥಿಗಳ ಈ ಜಾಗೃತಿ ಕಾರ್ಯಕ್ರಮವನ್ನು ಪ್ರಶಂಸಿದರು.

Comments

comments

Leave a Reply

Read previous post:
ಮುಲ್ಕಿ ಬಿಜಾಪುರ ಕಾಲನಿಯಲ್ಲಿ ಮಳೆ ಗಾಳಿಯಿಂದ ಹಾನಿ

Photos By Prakash M Suvarna

Close