ಮುಲ್ಕಿ ಯುವವಾಹಿನಿಗೆ ರಾಮಚಂದ್ರ ಕೋಟ್ಯಾನ್ ಆಯ್ಕೆ

Photo by Narendra Kerekadu

ಮುಲ್ಕಿ : ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಯುವವಾಹಿನಿ ಮೂಲ್ಕಿ ಘಟಕದ ದಶಮಾನೋತ್ಸವ ವರ್ಷದ 2012ಮತ್ತು 2013ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಮಚಂದ್ರ ಟಿ. ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಮೇಶ್ ಬಂಗೇರ (ನಿಕಟಪೂರ್ವ ಅಧ್ಯಕ್ಷ), ಪ್ರಕಾಶ್ ಸುವರ್ಣ, ಚಿತ್ರಾ ಸಿ.ಸುವರ್ಣ (ಉಪಾಧ್ಯಕ್ಷರು), ಕುಶಲಾ ಎಸ್.ಕುಕ್ಯಾನ್ (ಕಾರ್ಯದರ್ಶಿ), ರಮಾನಾಥ ಸುವರ್ಣ (ಜೊತೆ ಕಾರ್ಯದರ್ಶಿ), ಭಾಸ್ಕರ ಕೋಟ್ಯಾನ್ ಚಿತ್ರಾಪು ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ರಘುನಾಥ ಅಂಚನ್, ಸುಗಂಧಿ ಸತೀಶ್ ಕೋಟ್ಯಾನ್, ಉಷಾ ನರೇಂದ್ರ ಕೆರೆಕಾಡು, ರಾಜೇಶ್ವರಿ ನಿತ್ಯಾನಂದ, ಗಗನ್ ಸುವರ್ಣ, ರಾಜೀವಿ ಕಡವಿನ ಬಾಗಿಲು, ತುಕಾರಾಂ ಸುವರ್ಣ, ಚೇತನ್‌ಕುಮಾರ್ ನಿಯುಕ್ತಿಗೊಂಡಿದ್ದಾರೆ.
ಪದಗ್ರಹಣ;
ಜೂನ್ 17ರಂದು ಮುಲ್ಕಿ ಬಿಲ್ಲವ ಸಂಘದಲ್ಲಿ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಆಶೀರ್ವಚನವನ್ನು ಕೇರಳದ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ನೀಡಲಿದ್ದಾರೆ, ದಶಮಾನೋತ್ಸವದ ಉದ್ಘಾಟನೆಯನ್ನು ಉಡುಪಿ ನಗರ ಸಭಾ ಅಧ್ಯಕ್ಷ ಕಿರಣ್‌ಕುಮಾರ್ ನೆರವೇರಿಸಲಿದ್ದಾರೆ, ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಅಧ್ಯಕ್ಷ ಕಿಶೋರ್ ಬಿಜೈ ವಹಿಸಲಿದ್ದಾರೆ. ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಾಘು ಸುವರ್ಣ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪದಗ್ರಹಣ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಯ ದತ್ತು ಸ್ವೀಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ಕಲಾವಿದರಿಗೆ ವಿಮಾ ಪಾಲಿಸಿ ವಿತರಣೆ ದಶಮಾನೊತ್ಸವದ ವರ್ಷಚರಣೆಯು ವಿಭಿನ್ನ ರೀತಿಯಲ್ಲಿ ಉದ್ಘಾಟನೆ ನಡೆಯಲಿದೆ ಎಂದು ನಿರ್ಗಮನ ಅಧ್ಯಕ್ಷ ರಮೇಶ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments

comments

Leave a Reply

Read previous post:
ಮುಲ್ಕಿ ಬಿ.ಜೆ.ಪಿ. ಶಕ್ತಿ ಕೇಂದ್ರ – ವಿಧಾನ ಪರಿಷತ್ ಚುನಾವಣೆ ವಿಜಯೋತ್ಸವ

Photo By Prakash Suvarna ಮುಲ್ಕಿ : ವಿಧಾನ ಪರಿಷತ್ ಚುನಾವಣೆಯಲ್ಲಿ  ನೈರುತ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಿ....

Close