ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ-ವೈದ್ಯಕೀಯ ಚಿಕಿತ್ಸಾ ಮತ್ತು ಮಾಹಿತಿ ಶಿಬಿರ

Photo By: PVRAO

ಕಿನ್ನಿಗೋಳಿ:  ತೋಕೂರು ಇಲ್ಲಿನ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರೋಟರೀ ಕ್ಲಬ್, ಮುಲ್ಕಿ, ಕೆ.ಎಸ್.ಹೆಗ್ಡೆ ಮಹಾ ವಿದ್ಯಾಲಯ , ದೇರಳಕಟ್ಟೆ, , ರಾಷ್ಟ್ರೀಯ ಸೇವಾ ಘಟಕ ಮತ್ತು ರೋವರ್ಸ್ ಘಟಕ, ಎಂ. ಆರ್.ಪೂಂಜಾ ಐ.ಟಿ.ಐ., ತಪೋವನ ಇವರ ಜಂಟೀ ಆಶ್ರಯದಲ್ಲಿ ವೈದ್ಯಕೀಯ ಚಿಕಿತ್ಸಾ ಮತ್ತು ಮಾಹಿತಿ ಶಿಬಿರವು  ನಡೆಯಿತು. ಶಿಬಿರದ ಉದ್ಘಾಟನೆಯನ್ನು ಶ್ರೀಮತಿ ಶ್ರೀಲತಾ ರಾವ್, ಪ್ರಾಂಶುಪಾಲೆ, ಎಮ್.ಆರ್.ಎಸ್.ಎಮ್, ಇಂಗ್ಲೀಷ್ ಮೀಡಿಯಂ ಶಾಲೆ, ತೋಕೂರು, ನಡೆಸಿಕೊಟ್ಟು, ಆರೋಗ್ಯದ ಕಾಳಜಿ ಹದಿಯರೆಯದ ಮಕ್ಕಳಲ್ಲಿ ಇದ್ದರೆ ಮುಂದೆ ಆಗಬಹುದಾದ ದೈಹಿಕ, ಮಾನಸಿಕ ತೊಂದರೆಗಳನ್ನು ತಡೆಗಟ್ಟಿ ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಡಾ| ಎನ್. ಉದಯಕಿರಣ್ ಮತ್ತು ಡಾ| ರಶ್ಮಿ ಇವರು ಶಿಬಿರದ ಮಹತ್ವವನ್ನು ತಿಳಿಸಿದರು. ಇನ್ನೊರ್ವ ಮುಖ್ಯ ಅತಿಥಿ ಶ್ರೀ ರಘುರಾಮ್ ರಾವ್, ಸುರೇಶ್ ಎಸ್. ಸಂದೋರ್ಭೋಚಿತವಾಗಿ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ವೈ.ಎನ್. ಸಾಲಿಯಾನ್ ಆರೋಗ್ಯವೇ ಭಾಗ್ಯ. ಇದನ್ನು ಇಂದಿನ ಯುವಜನತೆ ಅರಿತು ಆರೋಗ್ಯ ಕಾಪಾಡುವುದು ಅತ್ಯವಶ್ಯಕ ಎಂದು ಮಕ್ಕಳಿಗೆ ಕರೆಯಿತ್ತರು. ಸಂಸ್ಥೆಯ ವಿದ್ಯಾರ್ಥಿ ಚೇತನ್ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶ್ರೀ ದಯಾನಂದ ಲಾಗ್ವಾಣ್‌ಕರ್ ಸ್ವಾಗತಿಸಿದರು, ಶ್ರೀ ಲಕ್ಷ್ಮಿಕಾಂತ್ ಧನ್ಯವಾದವಿತ್ತರು. ಶ್ರೀ ವಿಶ್ವನಾಥ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Comments

comments

Leave a Reply

Read previous post:
Milana Charitable Trust Mangalore distributed school uniforms

James D Souza Matove Mangalore Milana Charitable Trust Mangalore distributed school uniforms  to the poor students of  Vidyajyothi High School Vidynagar...

Close