ಮುಲ್ಕಿಯ ಶ್ರೀ ನವದುರ್ಗಾ ಯುವಕ ವೃಂದದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ

Photo by Narendra Kerekadu

ಮುಲ್ಕಿ : ಸಂಘಟಿತ ನಿರ್ಣಯ ಎಂದಿಗೂ ಅರ್ಥಪೂರ್ಣ ಎಂದು ಕೊಲಕಾಡಿಯ ವೇದ ಮೂರ್ತಿ ಶ್ರೀ ವಾದಿರಾಜ ಉಪಾಧ್ಯಾಯ ಹೇಳಿದರು. ಅವರು ಶುಕ್ರವಾರ ಸಂಜೆ ಮುಲ್ಕಿ ಆರ್.ಆರ್.ಸಭಾಭವನದಲ್ಲಿ ಮುಲ್ಕಿಯ ಶ್ರೀ ನವದುರ್ಗಾ ಯುವಕ ವೃಂದದ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ  ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಯುವ ಪೀಳಿಗೆಯನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಯೋಜನೆಯ ನಿರ್ವಹಿಸುವ ನವದುರ್ಗಾಯುವಕ ವೃಂದದ ಕಾರ್ಯ ಎಂದೆಂದಿಗೂ ಶ್ಲಾಘನೀಯ ಎಂದರು. ಈ ಸಂದರ್ಭ ಮುಲ್ಕಿ ಹೋಬಳಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಮುಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದಅನೂಷಾ (607), ಮೇಘನಾ.ಬಿ. (607) ರಕ್ಷಾ (606) ಇವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ ವಹಿಸಿದ್ದರು. ಬಪ್ಪನಾಡು ದೇವಳದ ಅಚಕರಾದ ಶ್ರೀಪತಿ ಉಪಾದ್ಯಾಯ, ಕುಮಾರ್ ಎಸೋಸಿಯೇಟ್ಸ್‌ನ ಮನೋಜ್ ಕುಮಾರ್, ಮುಲ್ಕಿ ನಗರ ಪಂಚಾಯತ್ ಸದಸ್ಯ ಸತೀಶ್ ಅಂಚನ್, ಮಂಗಳೂರು ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಮುಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಎಚ್.ವಿ. ಕೋಟ್ಯಾನ್, ಯುವಕ ವೃಂದದ ಗೌರವಾಧ್ಯಕ್ಷ ಚಂದ್ರಹಾಸ್ ಸಾಲ್ಯಾನ್(ಎ.ಎಸ್.ಐ)ಅಧ್ಯಕ್ಷರಾದ ಗಣೇಶ್ ಪ್ರಸಾದ್, ಕಾರ್ಯದರ್ಶಿ ಭಾಸ್ಕರ್, ಕೋಶಾಧಿಕಾರಿ ನಾಗೇಶ್ ಕೋಟ್ಯಾನ್, ಜಯಪೂಜಾರಿ ಮತ್ತು ಸುರೇಶ್ ಶೇರಿಗಾರ್ ಉಪಸ್ಥಿತರಿದ್ದರು. ಉದಯ ಅಮೀನ್ ಮಟ್ಟು ಸ್ವಾಗತಿಸಿದರು. ನರೇಂದ್ರ ಕೆರೆಕಾಡು ನಿರೂಪಿಸಿ ವಂದಿಸಿದರು

Comments

comments

Leave a Reply

Read previous post:
ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ-ವೈದ್ಯಕೀಯ ಚಿಕಿತ್ಸಾ ಮತ್ತು ಮಾಹಿತಿ ಶಿಬಿರ

Photo By: PVRAO ಕಿನ್ನಿಗೋಳಿ:  ತೋಕೂರು ಇಲ್ಲಿನ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರೋಟರೀ ಕ್ಲಬ್, ಮುಲ್ಕಿ, ಕೆ.ಎಸ್.ಹೆಗ್ಡೆ ಮಹಾ ವಿದ್ಯಾಲಯ , ದೇರಳಕಟ್ಟೆ, , ರಾಷ್ಟ್ರೀಯ ಸೇವಾ ಘಟಕ...

Close