ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಗೆ ಬಸ್ಸಿನ ವ್ಯವಸ್ಥೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಈ ಸಾಲಿನ ಶೈಕ್ಷಣಿಕ  ವರ್ಷದಿಂದ ವಿದ್ಯಾರ್ಥಿಗಳಿಗಾಗಿ ಬಸ್ಸಿನ ವ್ಯವಸ್ಥೆಯನ್ನು ಕಿನ್ನಿಗೋಳಿ ರೋಟರಿ ಕ್ಲಬ್ ಹಾಗೂ ಮೂರುಕಾವೇರಿ ಕರ್ನಾಟಕ ಬ್ಯಾಂಕ್ ಶಾಖೆಯ ಸಹಕಾರದೊಂದಿಗೆ ಮಾಡಲಾಗಿದ್ದು ಬಸ್ಸಿನ ಓಡಾಟವನ್ನು ಶನಿವಾರ ಪ್ರಾರಂಭಿಸಲಾಯಿತು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ಜಯರಾಮ ಪೂಂಜಾ, ರೋಟರಿ ಶಾಲಾ ಕಾರ್ಯದರ್ಶಿ ಪಿ. ಸತೀಶ್ ರಾವ್, ಕೋಶಾಧಿಕಾರಿ ವಲೇರಿಯನ್ ಡಿ’ಸೋಜಾ, ಮೂರುಕಾವೇರಿ ಕರ್ನಾಟಕ ಬ್ಯಾಂಕಿನ ಶಾಖಾ ಪ್ರಬಂಧಕ ಸದಾನಂದ ಎಸ್, ರೋಟರಿ ಶಾಲಾ ಮುಖ್ಯೋಪಾಧ್ಯಾಯ ಗಿಲ್ಬರ್ಟ್ ಡಿ’ಸೋಜಾ, ರೋಟರಿ ಸದಸ್ಯರಾದ ಎಸ್. ವಿ,ಶೆಣೈ, ಸತೀಶ್ಚಂದ್ರ ಹೆಗ್ಡೆ, ಅಯ್ಯಪ್ಪನ್ ನಾಯರ್, ಬಾಲಕೃಷ್ಣ ಶೆಟ್ಟಿ, ರೋಟರಿ ಕಾರ್ಯದರ್ಶಿ ಯಶವಂತ ಐಕಳ, ಬ್ಯಾಂಕಿನ ಸಿಬ್ಬಂದಿಗಳಾದ  ಅನಂತ ಪೈ, ಗಣೇಶ್. ಪಿ, ವೈಶಾಲಿ ಪ್ರಭು, ಸೀಮಾ, ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿಯ ಶ್ರೀ ನವದುರ್ಗಾ ಯುವಕ ವೃಂದದ ಆಶ್ರಯದಲ್ಲಿ ಶೈಕ್ಷಣಿಕ ಸಹಾಯ

Photo by Narendra Kerekadu ಮುಲ್ಕಿ: ಇಲ್ಲಿನ ಆರ್.ಆರ್.ಸಭಾಭವನದಲ್ಲಿ ಶುಕ್ರವಾರ ಮುಲ್ಕಿಯ ಶ್ರೀ ನವದುರ್ಗಾ ಯುವಕ ವೃಂದದ ಆಶ್ರಯದಲ್ಲಿ ನಡೆದ ಶೈಕ್ಷಣಿಕ ಸಹಾಯ ಕಾರ್ಯಕ್ರಮದಲ್ಲಿ ಕಕ್ವ ಸರಕಾರಿ...

Close