ಕಿನ್ನಿಗೋಳಿ ರೋಟರಿಯಲ್ಲಿ ಅಧ್ಯಕ್ಷರ ಸಂಜೆ, ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿಯಲ್ಲಿ ಅಧ್ಯಕ್ಷರ ಸಂಜೆ ಹಾಗೂ ಸನ್ಮಾನ ಸಮಾರಂಭವು ಸೋಮವಾರದಂದು ಸಹಕಾರ ಸೌಧದಲ್ಲಿ ನಡೆಯಿತು. ಯುಗಪುರುಷ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಭುವನಾಭಿರಾಮ ಉಡುಪ, ವಲಯ 3ರ ಗವರ್ನರ್ ರಾಮರಾಯ ಪಾಟ್ಕರ್ ರವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ರೋಟರಿಯ ಸದಸ್ಯರ ಮಾಹಿತಿ ಪುಸ್ತಕವನ್ನು ರಾಮರಾಯ ಪಾಟ್ಕರ್ ಬಿಡುಗಡೆಗೊಳಿಸಿದರು. ವಲಯ 3ರ ವಲಯ ಸೇನಾನಿ ಹೆರಿಕ್ ಪಾಯಸ್, ನಿಕಟಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಹೆಗ್ಡೆ, ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರಾದ ಜಯರಾಮ ಪೂಂಜಾ ಸ್ವಾಗತಿಸಿ ತಮ್ಮ ಅವಧಿಯಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನು ಅಭಿನಂದಿಸಿದರು. ಕಾರ್ಯದರ್ಶಿ ಯಶವಂತ ಐಕಳ ವಂದಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿ ಅಧ್ಯಕ್ಷರಾಗಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಆಯ್ಕೆ

ಕಿನ್ನಿಗೋಳಿ :  ಕಿನ್ನಿಗೋಳಿ ರೋಟರಿಯ 2012-13ನೇ ಸಾಲಿನ ಅಧ್ಯಕ್ಷರಾಗಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಮಂಗಳೂರಿನಲ್ಲಿ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯಲ್ಲಿ ಉದ್ಯೋಗಿಯಾಗಿದ್ದಾರೆ. ಪದಾಧಿಕಾರಿಗಳು ನಿಕಟಪೂರ್ವಾಧ್ಯಕ್ಷ  : ಜಯರಾಮ...

Close