ಯುವವಾಹಿನಿ ಮುಲ್ಕಿ ಘಟಕದ ಪದಗ್ರಹಣ,ಪ್ರತಿಭಾ ಪುರಸ್ಕಾರ ಮತ್ತು ದಶಮಾನೋತ್ಸವ ವರ್ಷಾರಂಭ

Photo By Bhagyavan Sanil

ಮುಲ್ಕಿ: ಸಂಘ ಸಂಸ್ಥೆಗಳು ಯುವ ಪೀಳಿಗೆಯನ್ನು ನೈತಿಕ ಮಾರ್ಗದರ್ಶನದೊಂದಿಗೆ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಹೊರುವುದು ಇಂದಿನ ಆಧುನಿಕ ಜೀವನದ ಅಗತ್ಯವಾಗಿದೆಎಂದು ಕೇರಳ ಶಿವಗಿರಿ ಮಠದ ಶ್ರೀಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಮುಲ್ಕಿ ಘಟಕದ ಪದಗ್ರಹಣ,ಪ್ರತಿಭಾ ಪುರಸ್ಕಾರ ಮತ್ತು ದಶಮಾನೋತ್ಸವ ವರ್ಷಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ವಿಶ್ವ ಮಾನವ ತತ್ವಗಳಿಂದ ಸಮಾಜದ ದೀನ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಕಾರಣರಾಗಿದ್ದು ಅವರ ತತ್ವ ಅನುಷ್ಠಾನಕ್ಕೆ ತರುವುದರೊಂದಿಗೆ ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು. ಈ ಸಂದರ್ಭ ಯುವ ವಾಹಿನಿ ಕೇಂದ್ರ ಸಮಿತಿಯ ಮುಖವಾಣಿ ಸಿಂಚನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಯುವವಾಹಿನಿ ಮುಲ್ಕಿ ಘಟಕದ ಪ್ರಥಮ ಅಧ್ಯಕ್ಷರಾದ ಚಂದ್ರಶೇಖರ ಸುವರ್ಣರು ದಶಮಾನೋತ್ಸವದ ಪ್ರಮುಖ ಹತ್ತು ಕಾರ್ಯಕ್ರಮಗಳಾದ ವಿವಿಧತೆಯ ದಶ ತರಬೇತಿ ಶಿಭಿರ,ಹಳ್ಳಿಯ ಹತ್ತು ಆಟಗಳ ಬಿರುವೆರೆ ಬಿರ‍್ದ್,ಆಟಿ ಆಚರಣೆಯ ವಿಭಿನ್ನ ದಶ ಸಂಭ್ರಮ, ದಶ ವಿಶೇಷತೆಗಳ ತುಳುವೆರೆ ತುಡರ ಪರ್ಬ, ವಧು ವರರ ಸಮಾವೇಶ, ಆರ್ಥಿಕ ದುಸ್ಥಿತಿಯಲ್ಲಿರುವವರಿಗೆ ಮನೆ ಮತ್ತು ವಿದ್ಯೆಗೆ ಸಹಾಯ, ವಿದ್ಯೆ-ಉದ್ಯೋಗ-ಸಂಪರ್ಕ-ಸಾಹಿತ್ಯ-ಕಲೆ-ಸಂಸ್ಕೃತಿಯ ಕಮ್ಮಟ, ತುಳುನಾಡಿನಲ್ಲಿ ಅಳಿದು ಜನಮಾನಸದಲ್ಲಿ ಉಳಿದವರ ಬಗ್ಗೆ ಮಾಹಿತಿ ,ಹೊರ ರಾಜ್ಯದಲ್ಲಿ ಯುವ ವಾಹಿನಿ ಕಾರ್ಯಕ್ರಮ,ಬಿಲ್ಲವ ಸಮಾಜದ ಸದೃಡ ಮಹಾ ಸಮ್ಮೇಳನವನ್ನು ಪ್ರಕಟಿಸಿದರು.
ದಶಮಾನೋತ್ಸವ ಉದ್ಘಾಟನೆ: ಮುಲ್ಕಿ ಯುವವಾಹಿನಿಯ ಒಂಬತ್ತು ಪೂರ್ವಾಧ್ಯಕ್ಷರು ಶುಭವಸ್ತುಗಳ ಸಹಿತ ವೇದಿಕೆಗೆ ಬಂದು ದಶಮಾನೋತ್ಸವದ ಅಧ್ಯಕ್ಷರ ಜೊತೆಗೆ ಹತ್ತು ದೀಪಗಳನ್ನು ಉರಿಸಿದ ಬಳಿಕ ಅತಿಥಿಗಳು ದಶಮಾನೋತ್ಸವದ ಲಾಂಛನ ಬಿಡುಗಡೆ ಮಾಡುವುದರೊಂದಿಗೆ ಕಾರ್ಯಕ್ರಮ ವಿಶಿಷ್ಠ ರೀತಿಯಲ್ಲಿ ಉದ್ಘಾಟಿಸಲಾಯಿತು. ದಶಮಾನೋತ್ಸವ ವರ್ಷಾಚರಣೆಯನ್ನು ಉದ್ಘಾಟಿಸಿದ ಉಡುಪಿ ನಗರ ಸಭೆ ಅಧ್ಯಕ್ಷರಾದ ಕಿರಣ್ ಕುಮಾರ್ ಮಾತನಾಡಿ, ನಮ್ಮ ಯವ ಜನರಿಗೆ ಹಿಂದಿನ ಸತ್ಯದ ಸಂಸ್ಕಾರವನ್ನುತಿಳಿಸುವುದು ಬಹಳ ಅಗತ್ಯವಾಗಿದ್ದು ನಾವು ಸತ್ಯದ ಹಾದಿಯಲ್ಲಿದ್ದರೆ ಯಾರಿಗೂ ತಲೆಬಾಗುವ ಅಗತ್ಯ ಬರದು ಎಂದ ಅವರು ಪ್ರದೇಶದ ಸಂಸ್ಕೃತಿಯನ್ನು ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಸೃಜನಶೀಲರಾಗಿ ಬೆಳೆಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಯುವವಾಹಿಸಿ ಮುಲ್ಕಿ ಘಟಕದ ದಶಮಾನೋತ್ಸವ ಕಾರ್ಯಕ್ರಮದ ಪ್ರಚಾರ ರಾಯಭಾರಿಯಾಗಿ ಸ್ಪಂದನ ವಾಹಿನಿ ಕಾರ್ಯ ನಿರ್ವಹಿಸಲಿದೆ ಎಂದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಾಲ ಕಲಾವಿದರಿಗೆ ವಿದ್ಯೆಗೆ ಸಹಕಾರ, ಸದಸ್ಯರಿಗೆ ಅಪಘಾತ ವಿಮಾ ಬಾಂಡ್ ನೀಡಿಕೆ, ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ,ಮುಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಮನೆಯನ್ನು ಆರ್ಥಿಕ ದುಸ್ಥಿತಿಯಲ್ಲಿರುವ ಯೋಗೀಶ್ ಪೂಜಾರಿ ಕಾರ್ನಾಡು ಮತ್ತು ಕಮಲ ಬಂಗೇರ ಕಂಡಲಚ್ಚಿಲ್ ರವರಿಗೆ ಗುರುಗಳ ಭಾವಚಿತ್ರ ಮತ್ತು ಮನೆಯ ಚಾವಿಯನ್ನುಯನ್ನು ನೀಡುವ ಮೂಲಕ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ.ಸಿ.ಸುವರ್ಣ ಹಸ್ತಾಂತರಿಸಿದರು.

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಮುಖವಾಣಿ ಸಿಂಚನ ಪತ್ರಿಕೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರಾದ ಜಯ.ಸಿ.ಸುವರ್ಣ ಬಿಡುಗಡೆಗಿಳಿಸಿದರು. ಮುಲ್ಕಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅನಿಷಾ, ಕವನ್ ರಾಜ್, ಅಕ್ಷಯ ಕುಮಾರಿ, ಗೌತಮ್ ಕೋಟ್ಯಾನ್, ಪೂಜಾ ಬಾಲಕೃಷ್ಣ, ಅಮೃತ ಇವರನ್ನು ಸಂಸ್ಥೆಯ ವತಿಯಿಂದ ಉಡುಪಿ ನಗರ ಸಭೆ ಅಧ್ಯಕ್ಷರಾದ ಕಿರಣ್ ಕುಮಾರ್ ಸನ್ಮಾನಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಕಿಶೋರ್.ಕೆ.ಬಿಜೈ ವಹಿಸಿದ್ದರು. ಅತಿಥಿಗಳಾಗಿ ಪ್ರಮೋದ್ ಇಲೆಕ್ಟ್ರೋನಿಕ್ಸ್ ಮಾಲಕರಾದ ಶಿವರಾಮ್.ಜಿ.ಅಮೀನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ, ಸಿಂಚನ ಪತ್ರಿಕೆಯ ಸಂಪಾದಕ ನರೇಶ್ ಸಸಿಹಿತ್ಲು, ಪೂರ್ವಾಧ್ಯಕ್ಷರುಗಳಾದ ಚಂದ್ರಶೇಖರ ಸುವರ್ಣ, ಯೋಗೀಶ್ ಕೋಟ್ಯಾನ್, ವಿಜಯ ಕುಮಾರ್ ಕುಬೆವೂರು, ಹರೀಂದ್ರ ಸುವರ್ಣ, ಉದಯ ಅಮೀನ್ ಮಟ್ಟು, ನರೇಂದ್ರ ಕೆರೆಕಾಡು, ಜಯ ಪೂಜಾರಿ, ಜಯಕುಮಾರ್ ಕುಬೆವೂರು, ರಮೇಶ್ ಬಂಗೇರಾ ಮತ್ತು ಪ್ರಸ್ಥುತ ಅಧ್ಯಕ್ಷರಾದ ರಾಮಚಂದ್ರ ಕೋಟ್ಯಾನ್ ಕಾರ್ಯದರ್ಶಿ ಕುಶಲ ಎಸ್.ಕೋಟ್ಯಾನ್ ವೇದಿಕೆಯಲ್ಲಿದ್ದರು.
ಪೂರ್ವಾಧ್ಯಕ್ಷ ರಮೇಶ್ ಬಂಗೇರಾ ಸ್ವಾಗತಿಸಿದರು. ವಿಜಯ ಕುಮಾರ್ ಕುಬೆವೂರು ಪ್ರಸ್ಥಾವಿಸಿದರು.ನರೇಂದ್ರ ಕೆರೆಕಾಡು ನಿರೂಪಿಸಿದರು.ಕುಶಲ ವಂದಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಗೆ ಬಸ್ಸಿನ ವ್ಯವಸ್ಥೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಈ ಸಾಲಿನ ಶೈಕ್ಷಣಿಕ  ವರ್ಷದಿಂದ ವಿದ್ಯಾರ್ಥಿಗಳಿಗಾಗಿ ಬಸ್ಸಿನ ವ್ಯವಸ್ಥೆಯನ್ನು ಕಿನ್ನಿಗೋಳಿ ರೋಟರಿ ಕ್ಲಬ್ ಹಾಗೂ ಮೂರುಕಾವೇರಿ ಕರ್ನಾಟಕ ಬ್ಯಾಂಕ್...

Close